ತಿಮ್ಮಪ್ಪನ ಸನ್ನಿಧಿಗೆ ತರಕಾರಿ ಹೊತ್ತೊಯ್ದ 134ನೇ ಲಾರಿ

5cmy6
Published on

ಚಿಂತಾಮಣಿ: ನೆರೆಯ ಆಂಧ್ರಪ್ರದೇಶದ ಪ್ರಖ್ಯಾತ ದೇವಾಲಯವಾದ ತಿರುಪತಿ ತಿರುಮಲ ಶ್ರೀ ವೆಂಕಟೇಶ್ವರಸ್ವಾಮಿ ಸನ್ನಿಧಾನಕ್ಕೆ ಇಲ್ಲಿನ ಭಕ್ತರು ಭಾನುವಾರ ತರಕಾರಿ ತುಂಬಿದ 134ನೇ ಲಾರಿಯನ್ನು ಕಳುಹಿಸಿಕೊಟ್ಟರು.

ಚಿಂತಾಮಣಿ ಪ್ಲವರ್​ ವೆಜಿಟೆಬಲ್​ ದಾನಿ ಎನ್​.ಸೋಮಶೇಖರ್​ ಬಾಬು ಮಾತನಾಡಿ, ತರಕಾರಿ ಲಾರಿಗೆ ನಗರದ ಹೊರವಲಯ ಕೋಲಾರ ರಸ್ತೆಯಲ್ಲಿರುವ ಶ್ರೀ ಆಂಜನೇಯಸ್ವಾಮಿ ದೇವಾಲಯದ ಬಳಿ ಪೂಜೆ ಸಲ್ಲಿಸಿ ಲಾರಿಯನ್ನು ಕಳುಹಿಸಿಕೊಡಲಾಗುತ್ತಿದೆ. ಇಂದು ಚಿಂತಾಮಣಿಯಿಂದ 134ನೇ ಲಾರಿ ಲೋಡ್​ ತರಕಾರಿ ರವಾನೆಯಾಗುತ್ತಿದೆ ಎಂದರು.

ಬೆಂಗಳೂರಿನ ಶ್ರೀ ಲ್ಮ ಬಾಲಾಜಿ ಸಿಲ್ವರ್​ ಪ್ಯಾರಾಡೈಸ್​ನ ಬದ್ರಿನಾಥ್​ ಇಂದಿನ ದಾನಿಗಳಾಗಿದ್ದು, ಅವರ ಹುಟ್ಟುಹಬ್ಬದ ಅಂಗವಾಗಿ 12 ಟನ್​ ವಿವಿಧ ತರಕಾರಿ ಮತ್ತು ಸೊಪ್ಪು ಕಳುಹಿಸಲಾಗುತ್ತಿದೆ.

ಇತ್ತೀಚೆಗೆ ನಡೆದ ಬ್ರಹ್ಮರಥೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ತಿರುಪತಿ ತಿರುಮಲಕ್ಕೆ ಬಂದಿದ್ದರಿಂದ ದೇವಾಲಯದ ಅಧಿಕಾರಿಗಳ ಬೇಡಿಕೆಯಂತೆ ತರಕಾರಿ ರವಾನಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ದಾನಿಗಳಾದ ಬದ್ರಿನಾಥ್​, ಸೋಮೆಶೇಖರ್​, ಗಂಗಾಧರ್​, ಕಾಮೇಶ್ವರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net