100ನೇ ವರ್ಷದ ಜೋಡಿ ಕರಗ ಮಹೋತ್ಸವ ಭಾನುವಾರ ಸಂಪನ್ನ

DCM_3254
Published on

ಮೈಸೂರು: ಕಳೆದ ಐದು ದಿನಗಳಿಂದ ಶ್ರದ್ಧಾ, ಭಕ್ತಿಭಾವದಿಂದ ನಡೆದ ಇಟ್ಟಿಗೆಗೂಡಿನ ಶ್ರೀ ಚಾಮುಂಡೇಶ್ವರಿ ಮತ್ತು ಶ್ರೀ ಮಾರಿಯಮ್ಮನವರ 100ನೇ ವರ್ಷದ ಜೋಡಿ ಕರಗ ಮಹೋತ್ಸವ ಭಾನುವಾರ ಸಂಪನ್ನಗೊಂಡಿತು.

ದಸರಾದಷ್ಟೇ ವೈಭವ ಹೊಂದಿರುವ ‘ಮಿನಿ ದಸರಾ’ವೆಂದೇ ಖ್ಯಾತಿ ಗಳಿಸಿರುವ ‘ಮೈಸೂರು ಕರಗ’ವನ್ನು ದುಷ್ಟಶಕ್ತಿಯ ವಿರುದ್ಧ ಶಿಷ್ಟ ಶಕ್ತಿಯ ವಿಜಯದ ಸಂಕೇತವಾಗಿ ಪ್ರತಿ ವರ್ಷ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿಜೃಂಭಣೆಯಿಂದ ದಸರಾ ಉತ್ಸವ ಆಚರಿಸಲಾಗುತ್ತದೆ.

ಕರಗದ ಕೊನೆಯ ದಿನದ ಅಂಗವಾಗಿ ಮಧ್ಯಾಹ್ನ ದೇವಸ್ಥಾನದ ಆವರಣದಲ್ಲಿ ದೇವಿಯರಿಗೆ ಅಂಬಲಿ ಸೇವೆ ಮಾಡಲಾಯಿತು. ನಂತರ ಸ್ಥಳದಲ್ಲಿ ನೆರೆದಿದ್ದ ನೂರಾರು ಭಕ್ತರ ಸಮೂಹದ ನಡುವೆ ಅರಿಶಿನದ ಓಕುಳಿ ಉತ್ಸವ ನೆರೆವೇರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net