

ಬೆಂಗಳೂರು: ಸಮೃದ್ಧ ಸಾಹಿತ್ಯದ 100ನೇ ಕೃತಿ ಲೋಕಾರ್ಪಣೆ ಸಮಾರಂಭ ಸೆ,29ರ ಭಾನುವಾರ ಬಿಡುಗಡೆಗೊಳ್ಳಲಿದೆ. ವೀರ ಸಾವರ್ಕರ್ ಮತ್ತು ಹಿಂದುತ್ವ ಕೃತಿಯ ಕನ್ನಡ ಅನುವಾದದ ಗ್ರಂಥಗಳು ಬಿಡುಗಡೆಯಾಗಲಿವೆ.
ಅಂದು ಬೆಳಗ್ಗೆ 10.30ಕ್ಕೆ ಬನಶಂಕರಿಯ ಸುಚಿತ್ರ ಫಿಲಂ ಸೊಸೈಟಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಸಿಟಿ ರವಿ ಮತ್ತು ಚಕ್ರವರ್ತಿ ಸೂಲಿಬೆಲೆ ಪಾಲ್ಗೊಳ್ಳಲಿದ್ದಾರೆ.
ಧನಂಜಯ್ ಕೀರ್ ಬರೆದಿರುವ ವೀರಸಾವರ್ಕರ್ ಹಾಗೂ ಸ್ವತಃ ವೀರಸಾವರ್ಕರ್ ಬರೆದಿರುವ ಹಿಂದುತ್ವ ಕೃತಿಗಳನ್ನು ಡಾ.ಜಿ.ಬಿ.ಹರೀಶ್ ಕನ್ನಡಕ್ಕೆ ಅನುವಾದಿಸಿದ್ದಾರೆ. 750ಕ್ಕೂ ಹೆಚ್ಚು ಪುಟಗಳ ಈ ಕೃತಿ ಸಾವರ್ಕರ್ ಸಮಗ್ರ ಜೀವನ ನೋಟವನ್ನು ಪರಿಚಯಿಸುತ್ತದೆ. ಸಾವರ್ಕರ್ ಅವರ ಕುರಿತು ಕಂಡು ಕೇಳದ ಅನೇಕ ಘಟನೆಗಳು, ವಿಷಯಗಳು ಮತ್ತು ಚಿತ್ರಣಗಳು ಕೃತಿಯಲ್ಲಿವೆ.
ಸಮೃದ್ಧ ಸಾಹಿತ್ಯದ 100ನೇ ಕೃತಿ ಇದು ಪ್ರಕಟವಾಗುತ್ತಿರುವುದು ಅಷ್ಟೇ ಅಲ್ಲದೆ ಹಿಂದುತ್ವ ಕನ್ನಡ ಅನುವಾದ ಪುಸ್ತಕದ 25ನೇ ಮುದ್ರಣದ ಸಂಭ್ರಮವೂ ಈ ಕಾರ್ಯಕ್ರಮ ಒಳಗೊಂಡಿದೆ. ಮೂಲ ಹಿಂದುತ್ವ ಕೃತಿ ಪ್ರಕಟಗೊಂಡು 100 ವರ್ಷಗಳು ಪೂರ್ಣಗೊಂಡಿದ್ದು ಅದರ ಶತಮಾನೋತ್ಸವದ ಆಚರಣೆಯನ್ನು ಇದೇ ವೇಳೆ ಹಮ್ಮಿಕೊಳ್ಳಲಾಗಿದೆ.