

ಬೆಂಗಳೂರು: ಕರೊನಾ ಸೋಂಕಿಗೆ ತಲ್ಲಣಗೊಂಡಿರುವ ರಾಜ್ಯ ರಾಜಧಾನಿಯ ಜನರಿಗೊಂದು ಸಮಾಧಾನಕರ ಸುದ್ದಿ ಇಲ್ಲಿದೆ.
ಮಕ್ಕಳು, ಯುವಜನತೆ, ವೃದ್ಧರು ಎನ್ನದೆ ಎಲ್ಲರಲ್ಲೂ ಕಾಣಿಸಿಕೊಳ್ಳುತ್ತಿರುವ ಸೋಂಕಿಗೆ ಹಲವು ಸಾವು-ನೋವು ಸಂಭವಿಸಿದೆ. ವೃದ್ಧರಿಗೆ ಕೋವಿಡ್ ಬಂದರೆ ತುಂಬಾ ಕಷ್ಟ ಎಂಬ ಸ್ಥಿತಿಯ ಕಾರ್ಮೋಡ ಎಲ್ಲೆಡೆ ಕವಿದಿದೆ. ಈ ನಡುವೆ 100 ವರ್ಷದ ಅಜ್ಜಿಯೊಬ್ಬರು ಕರೊನಾ ಸೋಂಕಿನಿಂದ ಗುಣಮುಖರಾಗಿ ವಾಪಸ್ ಮನೆಗೆ ಮರಳಿದ್ದಾರೆ. ಇದನ್ನೂ ಓದಿರಿ ಕ್ವಾರಂಟೈನ್ನಲ್ಲಿರೋ ಸಚಿವರಿಗೆ ಕೋವಿಡ್ ಆಸ್ಪತ್ರೆಯಿಂದ ತಡರಾತ್ರಿ ಬಂತೊಂದು ಉಡುಗೊರೆ!
ಕುಮಾರಸ್ವಾಮಿ ಲೇಔಟ್ನ 100 ವರ್ಷದ ವೃದ್ಧೆಗೆ ಜೂ. 15ರಂದು ಕರೊನಾ ಪಾಸಿಟಿವ್ ಬಂದಿತ್ತು. ಅವರಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ 9 ದಿನದಲ್ಲಿ ಗುಣಮುಖರಾದ ವೃದ್ಧೆಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದ್ದು, ಮರಳಿ ಗೂಡಿಗೆ ಸೇರಿದ್ದಾರೆ.
ಕರೊನಾ ಭೀತಿ ಬಿಟ್ಟು, ಆತ್ಮವಿಶ್ವಾಸದಿಂದ ಚಿಕಿತ್ಸೆ ಪಡೆದರೆ ರೋಗ ಶೀಘ್ರವೇ ಗುಣಮುಖವಾಗಲಿದೆ ಎಂಬುದಕ್ಕೆ ಈ ಅಜ್ಜಿಯೇ ಸಾಕ್ಷಿ.