ಆರೋಗ್ಯ ಸುಧಾರಣೆಗೆ ಶಿಬಿರ ಅನುಕೂಲ

Untitled design (2)
Published on

ತಾವರಗೇರಾ: ಸಾರ್ವಜನಿಕರ ಆರೋಗ್ಯ ಸುಧಾರಣೆಗೆ ಹಾಗೂ ಚಿಕಿತ್ಸೆಗೆ ಇಂಥ ಶಿಬಿರಗಳು ಅನುಕೂಲಕರ ಎಂದು ಯುವ ಮುಖಂಡ ಶಶಿಧರ ಪಾಟೀಲ್ ಹೇಳಿದರು. ಪಟ್ಟಣದ ತ್ರಿ ವೀರಭದ್ರೇಶ್ವರ ಜಾತ್ರೆ ನಿಮಿತ್ತ ಬುಧವಾರ ದೇವಸ್ಥಾನದ ಆವರಣದಲ್ಲಿ ಜಿಪಂ, ಜಿಲ್ಲಾ ಆರೋಗ್ಯ ಆಯುಷ್ಯ ಇಲಾಖೆ ಮತ್ತು ಜಾತ್ರಾ ಸಮಿತಿ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಯಮನಪ್ಪ ಸಿರವಾರ, ಪ್ರಮುಖರಾದ ಮಲ್ಲಪ್ಪ ಜುಮ್ಲಾಪುರ, ಕೂಡಲೆಪ್ಪ ಬಾಳೆತೋಟ, ಅಮರೇಶ ಗಲಗಲಿ, ಶರಣಪ್ಪ ರಾಂಪುರ, ಚಂದ್ರಶೇಖರ್ ಮುಂಡರಗಿ, ವೈದ್ಯಾಧಿಕಾರಿಗಳಾದ ಆರ್.ಟಿ.ವಿರೂಪಾಕ್ಷಪ್ಪ, ವಿಜಯಲಕ್ಷ್ಮೀ, ಮಾರುತಿ ದೊಡ್ಡಮನಿ, ದೀಪಾ ಕಾಕತಿಕರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net