691 ಮಕ್ಕಳು ಪರೀಕ್ಷೆಗೆ ಹಾಜರ್

31 tvg p01
Published on

ತಾವರಗೇರಾ: ಪಟ್ಟಣದ ಎರಡು ಕೇಂದ್ರಗಳಲ್ಲಿ ಶುಕ್ರವಾರ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ನಡೆಯಿತು. ಶ್ರೀ ಶಶಿಧರಸ್ವಾಮಿ ವಿದ್ಯಾನಿಕೇತನ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಪಟ್ಟಣದ-8, ಮೆಣೇಧಾಳ-2, ಸಂಗನಾಳ-1, ಕಿಲ್ಲಾರಹಟ್ಟಿ-1 ಒಟ್ಟು 12 ಪ್ರೌಢಶಾಲೆಗಳ 340 ವಿದ್ಯಾರ್ಥಿಗಳು ಕನ್ನಡ ವಿಷಯ ಪರೀಕ್ಷೆ ಬರೆದರು.

164 ವಿದ್ಯಾರ್ಥಿಗಳು, 175 ವಿದ್ಯಾರ್ಥಿನಿಯರ ಪೈಕಿ ಒಬ್ಬ ವಿದ್ಯಾರ್ಥಿ ಗೈರಾಗಿದ್ದರು. 15 ಕೊಠಡಿಗಳಲ್ಲಿ ಪರೀಕ್ಷೆ ಬರೆಯಲಾಯಿತು. ಎಕ್ಸಾಂ ಕರ್ತವ್ಯಕ್ಕೆ 17 ಜನರನ್ನು ನಿಯೋಜಿಸಲಾಗಿತ್ತು. ಸಹಾಯ ಉಪ ಅಧೀಕ್ಷಕರಾಗಿ ಪ್ರಭಾಕರ್ ಅವರಡ್ಡಿ ಕಾರ್ಯನಿರ್ವಹಿಸಿದರು ಎಂದು ಪರೀಕ್ಷಾ ಕೇಂದ್ರದ ಅಧೀಕ್ಷಕ ರಾಮೇಶ್ವರ ಡಾಣಿ ತಿಳಿಸಿದರು.

ಕರ್ನಾಟಕ ಪಬ್ಲಿಕ್ ಶಾಲೆಯ 15 ಕೊಠಡಿಗಳಲ್ಲಿ 12 ಪ್ರೌಢಶಾಲೆಗಳ ಒಟ್ಟು 353 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. 187 ವಿದ್ಯಾರ್ಥಿಗಳು, 165 ವಿದ್ಯಾರ್ಥಿನಿಯರ ಬೈಕಿ ಒಬ್ಬ ವಿದ್ಯಾರ್ಥಿನಿ ಗೈರಾಗಿದ್ದರು. 17 ಜನ ಕೊಠಡಿಗಳ ನಿಯೋಜಕರು, ಸಹಾಯಕ ಅಧೀಕ್ಷಕರಾಗಿ ಮಂಜುನಾಥ ಬಿಳೆಗುಡ್ಡ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಪರೀಕ್ಷಾ ಕೇಂದ್ರದ ಅಧೀಕ್ಷಕಿ ಜ್ಯೋತಿ ಹುಲಿಯಾಪೂರು ತಿಳಿಸಿದರು. ಸಂಚಾರ ಜಾಗೃತಿ ದಳದ ಶರಣಪ್ಪ ತೆಮ್ಮಿನಾಳ ಎರಡೂ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net