ರೊಟ್ಟಿ ಬುತ್ತಿ ಹೊತ್ತು ತಂದ ಮಹಿಳೆಯರು

ಟಿವಿಜಿP03
ನವಲಹಳ್ಳಿ ಗ್ರಾಮದಲ್ಲಿ ಶ್ರೀ ಶರಣಬಸವೇಶ್ವರ ಪುರಾಣ ಪ್ರವಚನ ನಿಮಿತ್ತಬ ಮಹಿಳೆಯರು ಬುತ್ತಿ ತಂದರು.
Published on

ತಾವರಗೇರಾ: ಸಮೀಪದ ನವಲಹಳ್ಳಿ ಗ್ರಾಮದ ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ಪುರಾಣ ಪ್ರವಚನದ ನಿಮಿತ್ತ ಹಮ್ಮಿಕೊಂಡಿದ್ದ ಬೆಳದಿಂಗಳ ಬುತ್ತಿ ವಿತರಣೆ ಕಾರ್ಯಕ್ರಮಕ್ಕೆ ಮಂಗಳವಾರ ಸಂಜೆ ಸುತ್ತಲಿನ ಗ್ರಾಮಗಳಿಂದ ಮಹಿಳೆಯರು ರೊಟ್ಟಿ ಬುತ್ತಿ ಹೊತ್ತು ತಂದರು.

ತಲೆ ಮೇಲೆ ರೊಟ್ಟಿ ಬುತ್ತಿ , ಕೈಯಲ್ಲಿ ಸಿಹಿ ತಿಂಡಿಗಳ ಚೀಲ ಹಿಡಿದು ಬಂದ ಮಹಿಳೆಯರು ತಿನಿಸುಗಳನ್ನು ಭಕ್ತರಿಗೆ ಹಂಚಿ ತಾವು ಸವಿದು ಭಾವೈಕ್ಯತೆಯ ಸಂದೇಶ ಸಾರಿದರು. ಈ ಕಾರ್ಯಕ್ರಮವು ಮಾ.19, 20 ಜರುಗಲಿದ್ದು, 21 ರಂದು ಪುರಾಣ ಮಂಗಲವಾಗಲಿದೆ.

ಆಧ್ಯಾತ್ಮಿಕ ಚಿಂತಕ ಪ್ರದೀಪ್ ಗುರೂಜಿ ಪ್ರವಚನ ನೀಡಿದರು. ಪ್ರವಚನಕಾರ ಜಯಪ್ಪ , ಮುರಗಯ್ಯಸ್ವಾಮಿ, ಬಸವರಾಜ ಮಾಸ್ತರ್, ಶಿವು ತಾವರಗೇರಾ, ಶರಣಯ್ಯ ಹಿರೇಮಠ ಮತ್ತು ಗ್ರಾಮದ ಪ್ರಮುಖರು, ವಿವಿಧ ಗ್ರಾಮಗಳ ಭಕ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net