ಎನ್ನೆಸ್ಸೆಸ್‌ನಿಂದ ಗ್ರಾಮೀಣ ಜೀವನ ಮನನ

NSS Camp
ತಾವರಗೇರಾ ಸಮೀಪದ ಅಡವಿಭಾವಿ ಗ್ರಾಮದಲ್ಲಿ ಏರ್ಪಡಿಸಿದ್ದ ಎನ್ನೆಸ್ಸೆಸ್ ಶಿಬಿರವನ್ನು ಕೊಪ್ಪಳ ವಿವಿ ಉಪಕುಲಪತಿ ಬಿ.ಕೆ. ರವಿ ಉದ್ಘಾಟಿಸಿದರು. ವಕೀಲ ಎಸ್.ಜಿ. ಪಾಟೀಲ, ಪ್ರಾಚಾರ್ಯೆ ಅರುಣಾಕುಮಾರಿ, ಕಲ್ಯಾಣ ಕುಮಾರ, ಡಾ.ಉಮಾಕಾಂತ ಇದ್ದರು.
Published on

ತಾವರಗೇರಾ: ರಾಷ್ಟ್ರೀಯ ಸೇವಾ ಯೋಜನೆಯಿಂದ ಶಿಬಿರಾರ್ಥಿಗಳಿಗೆ ಗ್ರಾಮೀಣರ ಜೀವನ ಶೈಲಿ ಮತ್ತು ಒಡನಾಟ ಬೆಳೆಯುತ್ತದೆ ಕೊಪ್ಪಳ ವಿಶ್ವ ವಿದ್ಯಾಲಯದ ಉಪ ಕುಲಪತಿ ಬಿ.ಕೆ. ರವಿ ಹೇಳಿದರು.

ಪಟ್ಟಣದ ಸರ್ಕಾರಿ ಡಿಗ್ರಿ ಕಾಲೇಜಿನಿಂದ ಸಮೀಪದ ಅಡವಿಭಾವಿ ಗ್ರಾಮದಲ್ಲಿ ಏರ್ಪಡಿಸಿದ್ದ ಎನ್ನೆಸ್ಸೆಸ್ ಶಿಬಿರಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿದರು. ಹಳ್ಳಿ ಜನರೊಂದಿಗೆ ಒಡನಾಟ ಹೊಂದುವುದರಿಂದ ಬದುಕು ಸರವಳವಾಗುತ್ತದೆ. ಜತೆಗೆ ಕಾಯಕ ಶ್ರದ್ಧೆ ಬೆಳೆಯುತ್ತದೆ ಎಂದರು.

ಬೆಂಗಳೂರು ವಿ.ವಿ.ಆವರಣರದಲ್ಲಿ ತರಬೇತಿ ಪಡೆದ ಎನ್ನೆಸ್ಸೆಸ್ ಶಿಬಿರಾರ್ಥಿಗಳು ವಂತಿಗೆ ಸಂಗ್ರಹಿಸಿ ಎನ್ನೆಸ್ಸೆಸ್ ಕಟ್ಟಡ ಕಟ್ಟಿಸಿದ್ದು, ದೇಶದಲ್ಲೇ ಪ್ರಥಮ. ಚಿತ್ರದುರ್ಗ ಜಿಲ್ಲೆಯಲ್ಲಿ ತಾವೂ ಸಹ 15 ವರ್ಷ ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದನ್ನು ಸ್ಮರಿಸಿಕೊಂಡರು. ಇನ್ನೂ ಒಂದು ವಾರ ವಿವಿಧ ತಜ್ಞರಿಂದ ಉಪನ್ಯಾಸವಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಲಹೆ ನೀಡಿದರು.

ವಕೀಲರ ಸಂಘದ ಅಧ್ಯಕ್ಷ ಎಸ್.ಜಿ. ಪಾಟೀಲ, ವಾಹನ ಕಾಯ್ದೆ, ಫೋಕ್ಸೋ, ವಾಹನಗಳ ಚಾಲನೆ ಪರವಾನಗಿ, ಬಾಲ್ಯ ವಿವಾಹ, ಜನನ ಪ್ರಮಾಣಪತ್ರ ಮುಂತಾದ ವಿಷಯಗಳ ಕುರಿತು ವಿವರಿಸಿದರು.

ಕಾಲೇಜಿನ ಪ್ರಾಚಾರ್ಯೆ ಅರುಣಾ ಕುಮಾರಿ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಡಾ.ಉಮಾಕಾಂತ, ಗ್ರಾಮದ ಮುಖಂಡ ಕಲ್ಯಾಣಕುಮಾರ ಮಾತನಾಡಿದರು. ಗ್ರಾಪಂ ಸದಸ್ಯರಾದ ಅಮರೇಶ ಮಾಲಗಿತ್ತಿ, ದುರುಗಪ್ಪ ಹರಿಜನ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹುಲ್ಲಪ್ಪ ಬಿಂಗಿ, ಮರಿಯಪ್ಪ ಸಿಂಗ್ರಿ, ದೊಡ್ಡಪ್ಪ ಬಸನಗೌಡ, ಶರಣಪ್ಪ, ಭೀಮನಗೌಡ, ಪರಸಪ್ಪ, ಹನುಮೇಶ ಇತರರಿದ್ದರು. ಉಪನ್ಯಾಸಕ ರಾಘವೇಂದ್ರರಡ್ಡಿ ಸ್ವಾಗತಿಸಿದರು. ಉಪನ್ಯಾಸಕಿ ಶಶಿಕಲಾ ನಿರೂಪಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net