ಸರತಿಯಲ್ಲಿ ನಿಂತು ತ್ರಿಲಿಂಗಗಳ ದರ್ಶನ

Mahashivratri
ತಾವರಗೇರಾ ಶ್ರೀ ವೈಜನಾಥ ದೇಗುಲದಲ್ಲಿನ ತ್ರಿಲಿಂಗಗಳ ದರ್ಶನ ಪಡೆಯಲು ಭಕ್ತರು ಸರತಿ ಸಾಲಿನಲ್ಲಿ ನಿಂತಿರುವುದು.
Published on

ತಾವರಗೇರಾ: ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಬುಧವಾರ ಮಧ್ಯರಾತ್ರಿ ವರೆಗೆ ಪಟ್ಟಣದ ಶ್ರೀ ವೈಜನಾಥ ದೇವಸ್ಥಾನಕ್ಕೆ ಸಾವಿರಾರು ಭಕ್ತರು ಭೇಟಿ ನೀಡಿ ಶ್ರೀಸ್ವಾಮಿ ದರ್ಶನ ಪಡೆದರು.

ಬೆಳಗ್ಗೆಯಿಂದಲೇ ದೇಗುಲದತ್ತ ಮುಖಮಾಡಿದ್ದ ಭಕ್ತರು, ಪೂಜೆ ಸಲ್ಲಿಸಿ ನೈವೇದ್ಯ ಅರ್ಪಿಸಿ ಭಕ್ತಿ ಮೆರೆದರು. ಪಟ್ಟಣವಲ್ಲದೆ ಸುತ್ತಲಿನ ಹಳ್ಳಿಗಳಿಂದಲೂ ಜನರು ಆಗಮಿಸಿದ್ದರು.

ಶ್ರೀಸ್ವಾಮಿ ದೇವಸ್ಥಾನ ಮುಖ್ಯ ದ್ವಾರದ ಎಡ ಮತ್ತು ಬಲ ಬದಿ ಮತ್ತು ನಡುವೆ ಶಿವಲಿಂಗವಿದ್ದು, ಇದಕ್ಕೆ ತ್ರಿಲಿಂಗ ದೇವಾಲಯ ವೆಂತಲೂ ಕರೆಯುತ್ತಾರೆ. ಮೂರು ಗರ್ಭ ಗುಡಿಯ ನಡುವೆ ಜೋಡು ಬಸವಗಳ ಶಿಲಾ ಮೂರ್ತಿಗಳಿವೆ. ಮುಖ್ಯ ದ್ವಾರದ ಮುಂದೆ ಶಿಲಾಶಾಸನವಿದ್ದು, ಇದರಲ್ಲಿ ವಿಜಯನಗರ ಅರಸರ ಕಾಲದಲ್ಲಿ ದೇಗುಲ ಕಟ್ಟಿರುವ ಬಗ್ಗೆ ಉಲ್ಲೇಖವಿದೆ ಎನ್ನಲಾಗಿದೆ.

ಇದರ ಅಣತಿ ದೂರದಲ್ಲಿ ಶಾಮೀದಲಿ ದರ್ಗಾ, ಶ್ರೀ ಆಂಜನೇಯಸ್ವಾಮಿ ಗುಡಿ ಇದೆ. ಮುಜರಾಯಿ ಇಲಾಖೆಗೆ ಸೇರಿದ ಈ ದೇಗುಲವನ್ನು ನಿರ್ವಹಣೆ ಮಾಡಲು ಅರ್ಚಕರು ಇದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net