

ತಾವರಗೇರಾ: ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಒಳ ರೋಗಿಗಳ ವಾರ್ಡ್‌ನಲ್ಲಿ ಶುಕ್ರವಾರ ಹಾವೊಂದು ಪ್ರತ್ಯಕ್ಷವಾಗಿದ್ದರಿಂದ ಕೆಲಹೊತ್ತು ಆತಂಕ ಸೃಷ್ಟಿಯಾಯಿತು. ಹಾವನ್ನು ಉರಗ ತಜ್ಞ ಶಿವು ವಿಠಲಾಪುರ ಅವರು ಸೆರೆ ಹಿಡಿದು ಅರಣ್ಯ ಪ್ರದೇಶಕ್ಕೆ ಬಿಟ್ಟರು. ಕಳೆದ ಒಂದು ವಾರದಿಂದ ಜಿಟಿ ಜಿಟಿ ಮಳೆಯಾಗುತ್ತಿದೆ. ಬಿಲದಲ್ಲಿ ನೀರು ಬರುವುದರಿಂದ ಹಾವುಗಳು ಹೊರಕ್ಕೆ ಬರುವ ಸಾಧ್ಯತೆ ಇದೆ. ಅಲ್ಲದೇ ಆಹಾರ ಅರಸುತ್ತಾ ಹೊರ ಬರುತ್ತವೆ ಎಂದು ಶಿವು ವಿಠಲಾಪುರ ಹೇಳಿದರು.