ಡಿಗ್ರಿ ಕಾಲೇಜು ಬಳಿ ಚಿರತೆ ಪ್ರತ್ಯಕ್ಷ

Leopard View
ತಾವರಗೇರಾ ಸಮೀಪದ ಗದ್ದೇರಹಟ್ಟಿ ಸಮೀಪ ಚಿರತೆ ಸೆರೆಗೆ ಬೋನು ಅಳವಡಿಸಿರುವುದು. ಅರಣ್ಯ ಇಲಾಖೆಯ ಮಂಜುನಾಥ, ಮಹಾಂತೇಶ ರಡ್ಡಿ ಮತ್ತು ರೈತರು ಇದ್ದರು.
Published on

ತಾವರಗೇರಾ: ಗದ್ದೇರಹಟ್ಟಿ, ವೀರಾಪೂರ ರಸ್ತೆಯ ಡಿಗ್ರಿ ಕಾಲೇಜು ಸಮೀಪ ಮಂಗಳವಾರ ರೈತನಿಗೆ ಚಿರತೆ ಕಾಣಿಸಿಕೊಂಡಿದ್ದು, ಕುರಿಯೊಂದನ್ನು ತಿಂದು ಹಾಕಿದೆ.

ಬುಧವಾರ ಗದ್ದೇರಹಟ್ಟಿ ಭಾಗದಲ್ಲಿ ಅರಣ್ಯ ಇಲಾಖೆ ಚಿರತೆ ಸೆರೆಗೆ ಬೋನು ಅಳವಡಿಸಿದ್ದು, ಹಗಲಿನಲ್ಲಿ ರೈತರು ಜಮೀನು ಕೆಲಸಕ್ಕೆ ತೆರಳಲು ಆತಂಕ ಪಡುವಂತಾಗಿದೆ. ಅರಣ್ಯಾಧಿಕಾರಿ ಮಂಜುನಾಥ, ಮಹಾಂತೇಶ ರಡ್ಡಿ, ಸಿಬ್ಬಂದಿ ಛತ್ರಪ್ಪ, ಲಕ್ಷ್ಮಣ, ಯಮನಪ್ಪ, ಗಂಗಾಧರ ಮತ್ತು ಸ್ಥಳೀಯ ರೈತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net