ಮಹಿಳೆ ಕೇವಲ ಅಡುಗೆ ಮನೆಗೆ ಸೀಮಿತವಲ್ಲ

That woman is not limited to the kitchen.
ವಿಜಯಪುರದ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ಹಮ್ಮಿಕೊಂಡಿದ್ದ ಮಹಿಳಾ ಸಾಂಸತಿಕ ಹಬ್ಬ ಕಾರ್ಯಕ್ರಮವನ್ನು ಡಾ. ಸುಜಾತ ಜಂಗಮಶೆಟ್ಟಿ ಉದ್ಘಾಟಿಸಿದರು. ಹಂಗಾಮಿ ಕುಲಪತಿ ಪ್ರೊ. ಶಾಂತಾದೇವಿ ಟಿ., ಶಂಕರಗೌಡ ಸೋಮನಾಳ, ಪ್ರೊ. ಎಚ್​.ಎಂ. ಚಂದ್ರಶೇಖರ, ಪ್ರೊ. ಲಕ್ಷಿ$್ಮದೇವಿ ವೈ., ಮತ್ತಿತರರಿದ್ದಾರೆ.
Published on

ವಿಜಯಪುರ: ಮಹಿಳೆಯರು ಎಷ್ಟೇ ಉನ್ನತ ಸ್ಥಾನಕ್ಕೇರಿದರೂ, ಅವರನ್ನು ಕೇವಲ ಅಡುಗೆ ಮನೆಗೆ ಮಾತ್ರ ಸೀಮಿತಗೊಳಿಸುವ ಪರಂಪರೆ ಇನ್ನು ಜೀವಂತವಿದೆ. ಮಹಿಳೆಯರು ಮುಂದುವರಿಯಲು ಕೇವಲ ಸೌಂದರ್ಯ ಮುಖ್ಯವಲ್ಲ, ಬದಲಾಗಿ ಗುಣ, ಸಾಧನೆ ಹಾಗೂ ನಡೆ, ನುಡಿಗಳು ಪ್ರಮುಖ ಪಾತ್ರ ವಹಿಸಲಿವೆ ಎಂದು ಕಲಬುರಗಿಯ ಕರ್ನಾಟಕ ರಂಗಾಯಣ ನಿರ್ದೇಶಕಿ ಡಾ. ಸುಜಾತ ಜಂಗಮಶೆಟ್ಟಿ ಹೇಳಿದರು.

ನಗರ ಹೊರವಲಯದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಅಹಲ್ಯಾಬಾಯಿ ಸ್ನಾತಕೋತ್ತರ ಮಹಿಳಾ ಅಧ್ಯಯನ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಮಹಿಳಾ ಸಾಂಸತಿಕ ಹಬ್ಬ&2025ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಾಧನೆಯು ನಿರಂತರ ಎಂದು ಅರಿತರೆ ಮಹಿಳೆ ತನ್ನ ಜೀವನದಲ್ಲಿ ಯಶಸ್ಸು ಸಾಧಿಸಬಲ್ಲಳು ಎಂದು ಸಲಹೆ ನೀಡಿದರು.

ಸಾಮಾಜಿಕ ಕಾರ್ಯಕರ್ತ ರೂಮಿ ಹರೀಶ ಮಾತನಾಡಿ, ಮಾನವ ಹಕ್ಕುಗಳೇ ಮಹಿಳಾ ಹಕ್ಕುಗಳಾಗಿದ್ದರೂ ಕೂಡ ಮಹಿಳೆಯರು ಇಂದಿಗೂ ತಮ್ಮ ಹಕ್ಕುಗಳಿಗಾಗಿ ಹೋರಾಡುವ ದುಸ್ಥಿತಿ ಇದೆ. ಕುಟುಂಬದಲ್ಲಿ ಉಂಟಾಗುವ ಕಿರುಕುಳ ಹಾಗೂ ಸಮಾಜದಲ್ಲಿ ಶೋಷಣೆ, ಅಸಮಾನತೆ ಹಾಗೂ ಆರ್ಥಿಕ, ಶೈಕ್ಷಣಿಕ ಅಡೆತಡೆಗಳು ಅವರ ಮುನ್ನಡೆಗೆ ಬಾಧಕವಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಮೌಲ್ಯಮಾಪನ ಕುಲಸಚಿವ ಪ್ರೊ. ಎಚ್​.ಎಂ. ಚಂದ್ರಶೇಖರ ಮಾತನಾಡಿ, ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಣಾಮಕಾರಿ ಪರಿಹಾರ ಕಂಡುಕೊಳ್ಳಲು ಚಿಂತನೆ ಮತ್ತು ಕಾರ್ಯಾಚರಣೆ ಅಗತ್ಯ. ಮಹಿಳೆಯರು ಶಿಕ್ಷಣ, ಆರ್ಥಿಕ ಸ್ವಾಯತ್ತತೆ ಮತ್ತು ಸ್ವಾಭಿಮಾನ ವೃದ್ಧಿಸಿಕೊಂಡು ಎಲ್ಲ ೇತ್ರಗಳಲ್ಲಿದಲ್ಲಿಯೂ ಸಬಲವಾದಾಗಲೇ ನಿಜವಾದ ಮಹಿಳಾ ಸಬಲೀಕರಣ ಸಾಧ್ಯ ಎಂದರು.

ಸಿಂಡಿಕೇಟ್​ ಸದಸ್ಯೆ ಮಲ್ಲಮ್ಮಾ ಯಾಳವಾರ ಮಾತನಾಡಿ, ಮಹಿಳಾ ಸಬಲೀಕರಣ ಶಿಕ್ಷಣದ ಮೂಲಕವೇ ಸಾಧ್ಯ. ಕಾನೂನಿನ ಅರಿವು ಮತ್ತು ಹಕ್ಕುಗಳ ಪ್ರೆ ಗ್ರಾಮೀಣ ಮಹಿಳೆಯರಿಗೆ ತಲುಪುವ ಅಗತ್ಯವಿದೆ. ಗ್ರಾಮೀಣ ಭಾಗದಲ್ಲಿ ಪೋಷಕರು ಇನ್ನೂ ಮಹಿಳಾ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿಲ್ಲ. ಅದನ್ನು ಬದಲಾಯಿಸುವುದು ಅತ್ಯಗತ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಮಹಿಳಾ ವಿವಿಯ ಹಂಗಾಮಿ ಕುಲಪತಿ ಪ್ರೊ. ಶಾಂತಾದೇವಿ ಟಿ., ಮಾತನಾಡಿ, ಶಿಕ್ಷಣ ಪಡೆದು ಆರ್ಥಿಕವಾಗಿ ಮುನ್ನಡೆದರೆ ಮಾತ್ರ ಮಹಿಳಾ ಸಬಲೀಕರಣವಾಗುವುದಿಲ್ಲ, ಎಲ್ಲ ಕೇತ್ರದಲ್ಲೂ ಮಹಿಳೆ ಮುಂದೆ ಸಾಗಿದಾಗ ಮಹಿಳೆ ಸಬಲೀಕರಣವಾಗಲಿದೆ. ದೇಶದ ಅಭಿವೃದ್ಧಿಯಲ್ಲಿ ಸಮಾನ ಅವಕಾಶ ಮಹಿಳೆಯರದ್ದಾಗಬೇಕು. ವಿವಿಧ ಅಭಿವೃದ್ಧಿ ಸಾಧಿಸುವಲ್ಲಿ ನಮ್ಮ ಮಹಿಳಾ ವಿವಿ ಸಾಯಾಗಿದೆ ಎಂದು ಹೇಳಿದರು.

ಮಹಿಳಾ ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ ರಸ ಪ್ರಶ್ನೆ ಕೇಳುವುದರ ಮೂಲಕ ವಿದ್ಯಾರ್ಥಿನಿಯರಿಗೆ ಹುರಿದುಂಬಿಸಿದರು. ಇದಕ್ಕೂ ಮುನ್ನ ಕನ್ನಡ ಸಂಸತಿ ಇಲಾಖೆಯಿಂದ ಡೊಳ್ಳುಕುಣಿತ, ಬಂಜಾರಾ ಸಮುದಾಯದ ಯುವತಿಯರಿಂದ ನೃತ್ಯ ಹಾಗೂ ದೈಹಿಕ ಶಿಕ್ಷಣ ಅಧ್ಯಯನ ವಿಭಾಗದ ವಿದ್ಯಾರ್ಥಿನಿಯರಿಂದ ಲೇಜಿಮ್​ ಮೂಲಕ ವಿವಿಯ ಮುಂಭಾಗದಿಂದ ವೇದಿಕೆಯವರೆಗೆ ಸಾಂಸತಿಕ ಮೆರವಣಿಗೆ ನಡೆಯಿತು.

ಮಹಿಳಾ ಸಾಂಸತಿಕ ಹಬ್ಬದ ಸದಸ್ಯ ಸಂಚಾಲಕಿ ಪ್ರೊ. ಲಕ್ಷಿ$್ಮದೇವಿ ವೈ., ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ. ಕಲಾವತಿ ಕಾಂಬಳೆ ಹಾಗೂ ಡಾ. ಭಾಗಶ್ರೀ ದೊಡ್ಡಮನಿ ಪರಿಚಯಿಸಿದರು. ಡಾ. ಜ್ಯೋತಿ ಉಪಾಧ್ಯೆ ನಿರೂಪಿಸಿದರು. ಡಾ. ಸರೋಜಾ ಸಂತಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net