ಭಾರತದ ಸೈನಿಕರಿಗೆ ನೈತಿಕ ಬೆಂಬಲ ಸೂಚಿಸಿ ಮೆರವಣಿಗೆ

20-MAY-GPT-1
Published on

ಗುಂಡ್ಲುಪೇಟೆ: ಪಹಲ್ಗಾಮ್‌ನಲ್ಲಿ ನರಮೇಧ ನಡೆಸಿದ್ದ ಉಗ್ರರ ವಿರುದ್ಧ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿದ್ದ ಭಾರತದ ಸೈನಿಕರಿಗೆ ನೈತಿಕ ಬೆಂಬಲ ಸೂಚಿಸುವ ಸಲುವಾಗಿ ತಾಲೂಕಿನ ತೆರಕಣಾಂಬಿ ಗ್ರಾಮದಲ್ಲಿ ಮಂಗಳವಾರ ಬೃಹತ್ ತಿರಂಗಾ ಮೆರವಣಿಗೆ ನಡೆಸಲಾಯಿತು.

ಭಗತ್ ಸಿಂಗ್ ಸೇವಾ ಟ್ರಸ್ಟ್ ಸದಸ್ಯರು ಹಾಗೂ ಗ್ರಾಮಸ್ಥರು ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಮಾಜಿ ಯೋಧ ನಂದೀಶ್ ಚಾಲನೆ ನೀಡಿದರು.

ಗ್ರಾಮದ ಆಂಜನೇಯ ದೇವಾಲಯದಿಂದ ಲಕ್ಷ್ಮೀವರದರಾಜ ದೇವಾಲಯದವರೆಗೆ 150 ಅಡಿ ಉದ್ದದ ರಾಷ್ಟ್ರ ಧ್ವಜವನ್ನು ಹೊತ್ತು ಕೈನಲ್ಲಿ ಬಾವುಟ ಹಿಡಿದು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ಯುವಕರು ಭಾರತೀಯ ಸೈನಿಕರ ಪರವಾಗಿ ಜಯಘೋಷ ಕೂಗಿದರು.

ಟ್ರಸ್ಟ್ ಅಧ್ಯಕ್ಷ ಕೆ.ವೆಂಕಟೇಶ, ಸದಸ್ಯರಾದ ಆರ್.ಮಹೇಶ್, ರಾಜೇಂದ್ರ, ಗೋವಿಂದ, ಕಾಂತರಾಜು, ವಿನೋದ್ ಕುಮಾರ್, ಕಿರಣ್ ಕುಮಾರ್, ಟಿ.ಪಿ.ನಾಗರಾಜು, ನಾಗರಾಜು, ಯಜಮಾನ್ ಶ್ರೀನಿವಾಸನಾಯ್ಕ, ಹಿಂದು ಸಂಘಟನೆಯ ಮಂಜುನಾಥ್, ಲಕ್ಕೂರು ಮಲ್ಲಿಕಾರ್ಜುನ, ಕುಲಗಾಣ ಮಹದೇವಸ್ವಾಮಿ, ಕಬಿನಿರಾಜು, ಪುರಸಭೆ ಸದಸ್ಯ ನಾಗೇಶ್ ಸೇರಿದಂತೆ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net