ಆ. 25, 26ರಂದು ಇಸ್ಕಾನ್ ಶ್ರೀಕೃಷ್ಣ ಜನ್ಮಾಷ್ಟಮಿ ಮಹೋತ್ಸವ

mng-aug20- iskon
ಶ್ರೀಕೃಷ್ಣ ಜನ್ಮಾಷ್ಟಮಿ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು. ಇಸ್ಕಾನ್‌ನ ಸುಂದರ ಗೌರ ದಾಸ, ಶ್ವೇತ ದೀಪದಾಸ, ಮಾಧ್ಯಮ ಸಲಹೆಗಾರ ಎಂ.ವಿ. ಮಲ್ಯ ಉಪಸ್ಥಿತರಿದ್ದರು.
Published on

ಮಂಗಳೂರು: ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘ (ಇಸ್ಕಾನ್) ಮಂಗಳೂರು ಶಾಖೆಯ ಆಶ್ರಯದಲ್ಲಿ ಆ. 25 ಹಾಗೂ 26ರಂದು ನಗರದ ಪಿ.ವಿ.ಎಸ್. ಕಲಾಕುಂಜ ಸಭಾಂಗಣದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಮಹೋತ್ಸವ ಆಯೋಜಿಸಲಾಗಿದೆ ಎಂದು ಇಸ್ಕಾನ್ ಮಂಗಳೂರು ಉಪಾಧ್ಯಕ್ಷ ಸನಂದನ ದಾಸ ಹೇಳಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಆ.25ರಂದು ಬೆಳಗ್ಗೆ 7.15ಕ್ಕೆ ಶೃಂಗಾರ, ಅಲಂಕಾರ ಪೂಜೆ, 9ಕ್ಕೆ ಬೆಣ್ಣೆ ಕೃಷ್ಣನಿಗೆ ತೊಟ್ಟಿಲು ಸೇವೆ, 11ಕ್ಕೆ ಅಭಿಷೇಕ, ಮಧ್ಯಾಹ್ನ 12.30ಕ್ಕೆ ರಾಜಭೋಗ ಆರತಿ, ಸಂಜೆ 4ಕ್ಕೆ ಭಜನಾ ಕಾರ್ಯಕ್ರಮ, 6.30ಕ್ಕೆ ಅಭಿಷೇಕ, ರಾತ್ರಿ 8.15ಕ್ಕೆ ಶಯನ ಆರತಿ, ಆ.26ರಂದು ಬೆಳಗ್ಗೆ 7.15ಕ್ಕೆ ಶೃಂಗಾರ, ಅಲಂಕಾರ ಪೂಜೆ, 9ಕ್ಕೆ ಬೆಣ್ಣೆ ಕೃಷ್ಣನಿಗೆ ತೊಟ್ಟಿಲು ಸೇವೆ, ಮಧ್ಯಾಹ್ನ 12.30ಕ್ಕೆ ರಾಜಭೋಗ ಆರತಿ, 2ರಿಂದ ಭಜನಾ ಕಾರ್ಯಕ್ರಮ, ರಾತ್ರಿ 9ಕ್ಕೆ ಮಹಾಭಿಷೇಕ, 12ಕ್ಕೆ ಮಹಾ ಮಂಗಳಾರತಿ ನೆರವೇರಲಿದೆ ಎಂದರು.

ಜನ್ಮಾಷ್ಟಮಿ ಮಹೋತ್ಸವದ ಹಿನ್ನೆಲೆಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಉತ್ಸವದ ಅಂಗವಾಗಿ ಆ.26ರಂದು ಬೆಳಗ್ಗೆ 10ರಿಂದ ಕೃಷ್ಣವೇಷ ಸ್ಪರ್ಧಾಕೂಟವನ್ನು ದೇವಾಲಯದ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಸ್ಪರ್ಧಾ ವಿಜೇತರಿಗೆ ಆ.26ರಂದು ಸಂಜೆ 7ಗಂಟೆಗೆ ಬಹುಮಾನ ವಿತರಿಸಲಾಗುವುದು. ಭಕ್ತಾಧಿಗಳಿಗೆ ಹರಿನಾಮ ಜಪ ಮಂತ್ರವನ್ನು ಜಪಿಸಿ 108 ಹೆಜ್ಜೆಗಳನ್ನು ದಾಟುವ ಕಾರ್ಯಕ್ರಮಕ್ಕೆ ವಿಶೇಷ ವೇದಿಕೆಯನ್ನು ನಿರ್ಮಿಸಲಾಗಿದೆ. ಆ.25ರಂದು ಸಂಜೆ 7 ಗಂಟೆಗೆ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಮುಖ್ಯಸ್ಥರಾದ ಭೀಮೇಶ್ವರ ಜೋಶಿ ಅವರು ಧಾರ್ಮಿಕ ಪ್ರವಚನ ನೀಡಲಿರುವರು ಎಂದರು.

ಮಥುರಾ ನಗರದಿಂದ ತರಿಸಲ್ಪಟ್ಟ ರಕ್ಷಾಬಂಧನವನ್ನು ಭಕ್ತಾಧಿಗಳಿಗೆ ನೀಡುವ ವಿಶೇಷ ಆಕರ್ಷಣೆ ಇದೆ. ಭಕ್ತಾದಿಗಳು ಧಾರ್ಮಿಕ ಸೇವಾ ಕಾರ್ಯದ ಅಂಗವಾಗಿ ಶ್ರೀಕೃಷ್ಣ ಅಷ್ಟೋತ್ತರ ಪೂಜೆ ಸಲ್ಲಿಸಬಹುದು, ಹೂ, ಹಣ್ಣು - ಹಂಪಲು, ತೆಂಗಿನಕಾಯಿ ಹಾಗೂ ತುಳಸಿ ದಳವನ್ನು ಅರ್ಪಿಸಲು ಅವಕಾಶವಿದೆ. ಬೆಳಗ್ಗೆ 9ರಿಂದ ರಾತ್ರಿ 12ರವರೆಗೆ ಪ್ರಸಾದ ವಿತರಣೆ ನಡೆಯಲಿದೆ ಎಂದರು.

ಈ ವೇಳೆ ಶ್ರೀಕೃಷ್ಣ ಜನ್ಮಾಷ್ಟಮಿ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು. ಇಸ್ಕಾನ್‌ನ ಸುಂದರ ಗೌರ ದಾಸ, ಶ್ವೇತ ದೀಪದಾಸ, ಮಾಧ್ಯಮ ಸಲಹೆಗಾರ ಎಂ.ವಿ. ಮಲ್ಯ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net