

ಮಾಗಡಿ : ತಂದೆ ಇಲ್ಲದ ಸಮಯದಲ್ಲಿ ಹಾಲು ಕೊಡಲು ಪುಟ್ಟ ಬಾಲಕಿ ಆ ನೀಚನ ಮನೆಗೆ ಹೋಗುತ್ತಿದ್ದಳು. ಆದರೆ ಏನು ಅರಿಯದ ಆ ಬಾಲಕಿಗೆ ಆ ಪಾಪಿ ಮಾಡಿದ್ದೇ ಬೇರೆ... ಆತನ ಹೇಯ ಕೃತ್ಯಕ್ಕೆ ಆಡಿಕೊಂಡು ಕಾಲ ಕಳೆಯ ಬೇಕಿದ್ದ ಪುಟ್ಟ ಬಾಲಕಿಯ ಹೊಟ್ಟೆಯಲ್ಲಿ ಮತ್ತೊಂದು ಮಗು ಜೀವ ಪಡೆಯುತ್ತಿದೆ...
ಹೌದು ಇಂತಹ ಘೋರ ಕೃತ್ಯ ನಡೆದಿರುವುದು ಮಾಗಡಿ ತಾಲೂಕಿನ ಗ್ರಾಮ ಒಂದರಲ್ಲಿ.
ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಬಾಲಕಿ ಚಿಕಿತ್ಸೆಗಾಗಿ ಆಸ್ಪತ್ರೆ ಗೆ ಬಂದಾಗ ಗರ್ಭಿಣಿ ಯಾಗಿರುವುದು ಪತ್ತೆಯಾಗಿದೆ. ಒಂದು ವರೆ ತಿಂಗಳು ಗರ್ಭಿಣಿ ಆಗಿರುವ ಬಾಲಕಿ.
ಹೊಟ್ಟೆ ನೋವಿನಿಂದ ಬಳಲುತಿದ್ದ ಬಾಲಕಿ ಸ್ಥಿತಿ ಕಂಡು ಪಾಲಕರು ಕಂಗಾಲಾಗಿದ್ದಾರೆ. ನಂತರ ಯಾರು ಮಾಡಿದ್ದು ಎಂದು ಪಾಲಕರು ಕೇಳಿದ ವೇಳೆ 56 ವರ್ಷದ ವ್ಯಕ್ತಿಯ ಹೆಸರನ್ನು ಬಾಲಕಿ ತಿಳಿಸಿದ್ದಾಳೆ.
ಹಸು ಹಾಲು ನೀಡಲು ಹೋದಾಗ ವೃದ್ಧನಿಂದ ಕೃತ್ಯ. ವೃದ್ಧನ ಮನೆಗೆ ಹಾಲು ಕೊಡಲು ಹೋಗುತ್ತಿದ್ದ ಬಾಲಕಿ ತಂದೆ,ತಂದೆ ಇಲ್ಲದ ದಿನ ಹಾಲು ಕೊಟ್ಟು ಬರಲು ಬಾಲಕಿತೆರಳುತ್ತಿದ್ದಳು.ಯಾರು ಇಲ್ಲದ ಸಮಯ ಬಾಲಕಿ ಜತೆ ಇಂಥಹ ದುಷ್ಕೃತ್ಯವೆಸಗಿದ್ದಾನೆ.
ಐದು ವರ್ಷಗಳ ಹಿಂದೆಯೂ ಬಾಲಕಿ ಗೆ ಜತೆ ಇಂಥಹ ಘಟನೆ ನಡೆದಿದೆ ಎನ್ನಲಾಗಿದೆ. ಭಯದಿಂದ ಸುಮ್ಮನಿದ್ದ ಬಾಲಕಿ ಐದು ವರ್ಷಗಳ ಬಳಿಕ ಮತ್ತೆ ಹಾಲು ಕೊಟ್ಟು ಬರಲು ಮನೆಗೆ ತೆರಳಿದ್ದ ಬಾಲಕಿ ಮೊದಲಿನಂತೆಯೇ ಸಲುಗೆ ಬೆಳಸಿ ಕುಕೃತ್ಯ
ಅತ್ಯಾಚಾರ ಆರೋಪದ ಮೇಲೆ ವೃದ್ಧನನ್ನು ಮಾಗಡಿ ಪೋಲೀಸರು ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿಕೊಂಡು ಬಂಧಿಸಿದ್ದಾರೆ.