ತರಗನಹಳ್ಳಿ ಡೇರಿ ಕಾರ್ಯದರ್ಶಿ ಅಮಾನತು

Oplus_131072
ನಂಜನಗೂಡು ತಾಲೂಕು ತರಗನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಅವ್ಯವಹಾರ ನಡೆದಿದೆ ಎಂದು ಗ್ರಾಮಸ್ಥರು ಕಾರ್ಯದರ್ಶಿ ನಡುವೆ ಮಾತಿನ ಚಕಮಕಿ ನಡೆಯಿತು.
Published on

ನಂಜನಗೂಡು: ತಾಲೂಕಿನ ತರಗನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ ಹಾಗೂ ಬಿಎಂಸಿ ಕೇಂದ್ರದ ಕಾರ್ಯದರ್ಶಿ ಮಹೇಶ್ ಅವರನ್ನು ತಾತ್ಕಾಲಿಕವಾಗಿ ಅಮಾನತು ಮಾಡಲಾಗಿದೆ ಎಂದು ಸಂಘದ ಅಧ್ಯಕ್ಷ ಗುರುಲಿಂಗಪ್ಪ ತಿಳಿಸಿದರು.

ಇತ್ತೀಚಿಗೆ ಸಂಘದ ಆವರಣದಲ್ಲಿ ಹಾಲು ಉತ್ಪಾದಕರು, ಆಡಳಿತ ಮಂಡಳಿಯ ಸಭೆಯನ್ನು ಆಯೋಜನೆ ಮಾಡಲಾಗಿತ್ತು. ಹಾಲು ಉತ್ಪಾದಕರ ಸಹಕಾರ ಸಂಘದ ಷೇರುದಾರರು ಹಾಗೂ ನೂರಾರು ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿ ಸಂಘದ ಕಾರ್ಯದರ್ಶಿ ಮಹೇಶ್ ವಿರುದ್ಧ ಹಲವು ಆರೋಪಗಳನ್ನು ಮಾಡಿದರು. ಹಾಲು ಶೇಖರಣೆ ಸಂದರ್ಭದಲ್ಲಿ ಪರೀಕ್ಷೆಗಾಗಿ ಪಡೆಯುವ ಹಾಲಿನ ಪ್ರಮಾಣ ಹೆಚ್ಚಾಗಿದೆ. ಸಂಘದ ಆಡಿಟ್ ವರದಿಯನ್ನು ಸಭೆಗೆ ಹಾಜರುಪಡಿಸಿಲ್ಲ. ಬಿಎಂಸಿ ಹಾಲು ಶೇಖರಣೆ ಸಂದರ್ಭದಲ್ಲಿ ಹಲವು ಲೋಪದೋಷಗಳು ಕಂಡುಬರುತ್ತಿದ್ದು, ಶೀಘ್ರದಲ್ಲಿ ಇದಕ್ಕೆಲ್ಲ ಕಡಿವಾಣ ಹಾಕಬೇಕು. ಸಂಘದ ತನಿಖೆ ನಡೆಯುವವರೆಗೆ ಕಾರ್ಯದರ್ಶಿ ಮಹೇಶ್ ಅವರನ್ನು ಅಮಾನತು ಮಾಡಬೇಕು ಎಂದು ಗ್ರಾಮದ ಮಹದೇವ ಪ್ರಸಾದ್, ನಟರಾಜು ಸೇರಿದಂತೆ ಗ್ರಾಮಸ್ಥರು ಪಟ್ಟು ಹಿಡಿದರು.

ಸಂಘದ ವಿಸ್ತರಣಾಧಿಕಾರಿ ನಂಜುಂಡಸ್ವಾಮಿ ಅವರಿಗೆ ಸಂಘದ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸುವಂತೆ ಇದೇ ವೇಳೆ ಮನವಿ ಪತ್ರ ನೀಡಲಾಯಿತು. ತಕ್ಷಣವೇ ತೀರ್ಮಾನಕ್ಕೆ ಬಂದ ಆಡಳಿತ ಮಂಡಳಿ, ಸಂಘದ ತನಿಖೆ ಮುಗಿಯುವವರೆಗೆ ಕಾರ್ಯದರ್ಶಿ ಮಹೇಶ್ ಅವರನ್ನು ತಾತ್ಕಾಲಿಕವಾಗಿ ಅಮಾನತು ಮಾಡಲಾಗಿದೆ ಎಂದು ಸಭೆಯಲ್ಲಿ ತಿಳಿಸಿರು. ನಂತರ ಹಾಲು ಉತ್ಪಾದಕರು ಹಾಗೂ ಕಾರ್ಯದರ್ಶಿ ನಡುವಿನ ಗಲಾಟೆ ಅಂತ್ಯಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net