

ಮಂಗಳೂರು: ಏಳು ಪಟ್ನ ಮೊಗವೀರ ಸಂಯುಕ್ತ ಸಭಾ (ಕದ್ರಿ) ವತಿಯಿಂದ ಗುರುವಾರ ಸಾಮೂಹಿಕ ಸಮುದ್ರ ಪೂಜೆಯು ತಣ್ಣೀರುಬಾವಿ ಕಡಲ ಕಿನಾರೆಯಲ್ಲಿ ಅಧ್ಯಕ್ಷ ಸುಭಾಸ್ ಚಂದ್ರ ಕಾಂಚನ್ ಅಧ್ಯಕ್ಷತೆಯಲ್ಲಿ ನಡೆಯಿತು
ರಾಜಯೋಗಿ ನಿರ್ಮಲಾನಾಥಜೀ ಮಹಾರಾಜ್ ಅವರು ಗಂಗಾಮಾತೆಗೆ ಹಾಲು, ಪುಷ್ಪ ಮತ್ತು ತೆಂಗಿನಕಾಯಿ ಸಮರ್ಪಿಸಿ ಪೂಜಿಸಿದರು. ಹಲವಾರು ವರ್ಷಗಳಿಂದ ಮೀನುಗಾರರು ಗಂಗೆ ಮಾತೆಗೆ ಪೂಜಿಸುವುದು ಸಂತಸದ ವಿಷಯ. ಮೀನುಗಾರರನ್ನು ರಕ್ಷಿಸಿ, ಅವರಿಗೆ ಅಭಿವೃದ್ಧಿ ಮತ್ತು ಸಂಪತ್ತು ನೀಡಲಿ ಎಂದು ಆಶೀರ್ವದಿಸಿದರು. ಮಂಗಳೂರು ಏಳು ಪಟ್ಣ ಮೊಗವೀರ ಸಭಾ (ಉರ್ವ) ಅಧ್ಯಕ್ಷ ಲೋಕೇಶ್ ಸುವರ್ಣ ಮುಖ್ಯ ಅತಿಥಿಯಾಗಿದ್ದರು.
ಪ್ರತಿ ಗ್ರಾಮದಲ್ಲಿ ಹಾಲು ಮತ್ತು ತೆಂಗಿನಕಾಯಿ ಸಂಗ್ರಹಿಸಿ ಭಜನೆ ಕಾರ್ಯಕ್ರಮದೊಂದಿಗೆ ಬ್ರಹ್ಮ ಬೊಬ್ಬರ್ಯ ದೈವ ಸ್ಥಾನ ಬೊಕ್ಕಪಟ್ಣದಲ್ಲಿ ಎಲ್ಲ ಗ್ರಾಮದವರು ಸೇರಿ ವಿಶೇಷ ಪ್ರಾರ್ಥನೆ ಸಲ್ಲಿಸಿ,ನಂತರ ತಣ್ಣೀರುಬಾವಿ ಕಡಲ ಕಿನಾರೆಯಲ್ಲಿ ಗಂಗಾಮಾತೆಗೆ ಸಮುದ್ರ ಪೂಜೆ ಜರಗಿದವು.
ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಟ್ರಸ್ಟಿ ನಾರಾಯಣ ಕೋಟ್ಯಾನ್, ದ . ಕ. ಮೊಗವೀರ ಮಹಿಳಾ ಸಂಘ ಅಧ್ಯಕ್ಷರಾದ ಉಷಾರಾಣಿ, ಸಂಯುಕ್ತ ಸಭಾ ಉಪಾಧ್ಯಕ್ಷರಾದ ಹೇಮಚಂದ್ರ ಸಾಲಿಯಾನ್, ಪ್ರಧಾನ ಕಾರ್ಯದರ್ಶಿ ಶ್ಯಾಮ ಸುಂದರ್ ಕಾಂಚನ್, ಜೊತೆ ಕಾರ್ಯದರ್ಶಿ ವಿಶುಕುಮಾರ್, ಕೋಶಾಧಿಕಾರಿ ರಂಜನ ಕಾಂಚನ್, ಎಲ್ಲ ಗ್ರಾಮದ ಗುರಿಕಾರರು, ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.