

ವಿಜಯವಾಣಿ ಸುದ್ದಿಜಾಲ ಧಾರವಾಡ
ಧಾರವಾಡದ ಅಭಿವೃದ್ಧಿಗಾಗಿ ಪ್ರತ್ಯೇಕ ಪಾಲಿಕೆ ಆಗಬೇಕು ಎಂಬ ಬೇಡಿಕೆ ಬಹಳ ದಿನಗಳಿಂದ ಇತ್ತು. ಸ್ಥಳೀಯ ಸಂಸ್ಥೆಗಳಾಗಿದ್ದ ಎರಡೂ ಸೇರಿ ಪಾಲಿಕೆ ಆಗಿದ್ದವು. ಇದೀಗ ಸರ್ಕಾರ ಪ್ರತ್ಯೇಕ ಪಾಲಿಕೆ ರಚನೆಗೆ ನಿರ್ಧರಿಸಿರುವ ಕ್ರಮಕ್ಕೆ ಶಾಸಕ ಅರವಿಂದ ಬೆಲ್ಲದ ಧನ್ಯವಾದ ತಿಳಿಸಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭೌಗೋಳಿಕವಾಗಿ ಬೆಂಗಳೂರು ನಂತರ ಹುಬ್ಬಳ್ಳಿ- ಧಾರವಾಡ ದೊಡ್ಡ ಪ್ರದೇಶ ಹೊಂದಿವೆ. ಇನ್ನಷ್ಟು ಬೆಳೆಯಬೇಕು ಎಂದರೆ ಎರಡು ಪಾಲಿಕೆ ಆಗಬೇಕಿತ್ತು. ಈ ಬಗ್ಗೆ 2020ರಲ್ಲೇ ಪಾಲಿಕೆಯ ಹಿಂದಿನ ಆಯುಕ್ತರ ಜತೆ ಚರ್ಚಿಸಿದ್ದೆ. 2021ರಲ್ಲಿ ಸಿಎಂ ಆಗಿದ್ದ ಯಡಿಯೂರಪ್ಪ ಅವರಿಗೆ ಮನವಿ ಬರೆದಿದ್ದೆ. ಬೊಮ್ಮಾಯಿ ಅವರಿಗೂ ಪತ್ರ ಬರೆದಿದ್ದೆ. 2022ರಲ್ಲಿ ಪಾಲಿಕೆಯಲ್ಲಿ ಠರಾವು ಆಗಿತ್ತು. ಸಚಿವ ಪ್ರಲ್ಹಾದ ಜೋಶಿ, ಸಂಸದ ಜಗದೀಶ ಶೆಟ್ಟರ್ ಅವರೂ ಒತ್ತಾಯಿಸಿದ್ದರು. ನಗರಾಭಿವೃದ್ಧಿ ಪ್ರಾಽಕಾರ ಕೂಡ ಒಪ್ಪಿಗೆ ನೀಡಿತ್ತು. ಕಾಂಗ್ರೆಸ್ ಸರ್ಕಾರ ಅದಕ್ಕೆ ಪೂರಕ ಕೆಲಸ ಮÁಡಿದೆ. ಶಾಸಕರಾದ ಪ್ರಸಾದ ಅಬ್ಬಯ್ಯ, ವಿನಯ ಕುಲಕರ್ಣಿ ಇದಕ್ಕೆ ಧ್ವನಿಗೂಡಿಸಿದ್ದರು. ಬೆಳಗಾವಿ, ಬೆಂಗಳೂರು ಅಽವೇಶನದಲ್ಲೂ ಚರ್ಚೆ ಆಗಿತ್ತು. ಈ ಬಗ್ಗೆ ನಾನು ವಿಶೇಷವಾಗಿ ಸರ್ಕಾರದ ಗಮನಕ್ಕೆ ತಂದಿದ್ದೆ. ಇದೀಗ ಸರ್ಕಾರ ಸರ್ಕಾರ ಸ್ಪಂದಿಸಿ ಒಪ್ಪಿಗೆ ಕೊಟ್ಟಿದೆ. ಎರಡೂ ನಗರಗಳಿಗೆ ಕೇಂದ್ರ ಹಾಗೂ ರಾಜ್ಯದ ಪ್ರತ್ಯೇಕ ಅನುದಾನ ಬರಲಿದೆ. ಎರಡೂ ನಗರಗಳಿಗೆ ಪ್ರತ್ಯೇಕ ಆಯುಕ್ತರು ಬರುವುದರಿಂದ ಅಭಿವೃದ್ಧಿ ಕೂಡ ಆಗಲಿದೆ ಎಂದು ಬೆಲ್ಲದ ತಿಳಿಸಿದ್ದಾರೆ.