

ವಿಜಯಪುರ: ಕೊಳವೆ ಬಾವಿಗೆ ಬಿದ್ದ ಬಾಲಕ ಸಾತ್ವಿಕನನ್ನು ರಕ್ಷಸಲು ಶ್ರಮಿಸಿದ ರಕ್ಷಣಾ ಕಾರ್ಯಾಚರಣೆ ಸಿಬ್ಬಂದಿಗಳ ಕಾರ್ಯಕ್ಕೆ ಇಲ್ಲಿನ ಎಪಿಎಂಸಿ ನೀಲಕಂಠೇಶ್ವರ ಮಾರ್ಕೇಟ್ ಯಾರ್ಡ್ನ ಮರ್ಚಂಟ್ ಅಸೋಸಿಯೇಶನ್ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿ, ಧನ್ಯವಾದ ಅರ್ಪಿಸಿದ್ದಾರೆ.
ಎಸ್ಡಿಆರ್ಎಫ್ ಮತ್ತು ಎನ್ಡಿಆರ್ಎಫ್ ತಂಡ ಸತತ 20 ಗಂಟೆಗಳ ಅವಿರತ ಪ್ರಯತ್ನದಿಂದಾಗಿ ಬಾಲಕ ಸಾತ್ವಿಕನನ್ನು ಉಳಿಸಿದ್ದಾರೆ.
ಅಲ್ಲದೇ, ಜಿಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ತಾಲೂಕಾಧಿಕಾರಿ ಮತ್ತು ವೈದ್ಯಾಧಿಕಾರಿ ವಿಶೇಷ ಕಾಳಜಿವಹಿಸಿ ಪವಾಡ ಸದೃಶ ರೀತಿಯಲ್ಲಿ ಸಾತ್ವಿಕನ ರಕ್ಷಿಸಿದ್ದಕ್ಕೆ ಮರ್ಚಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ರವೀಂದ್ರ ಎಸ್. ಬಿಜ್ಜರಗಿ ಮತ್ತು ಸಂದ ಪದಾಧಿಕಾರಿಗಳಾದ ನಿಲೇಶ ಬಿ. ಶಹಾ, ಪ್ರವಿಣ ಎಂ. ವಾರದ, ಮನೋಜ ಬಿ. ಬಗಲಿ, ಜಯಾನಂದ ಎಸ್. ತಾಳಿಕೋಟಿ, ರಮೇಶ ನಿಡೋಣಿ, ಸಿದ್ದಪ್ಪ ಜಿ. ಸಜ್ಜನ, ಹಾಗೂ ಸಂದ ಸದಸ್ಯರು ಪ್ರಕಟಣೆ ಮೂಲಕ ಕೃತಜ್ಞತೆ ತಿಳಿಸಿದ್ದಾರೆ.