

ಕುಂಬಳೆ (ಕಾಸರಗೋಡು): ಕೇರಳ ಬಿಜೆಪಿ ವಿಜಯ ಯಾತ್ರೆಗೆ ಚಾಲನೆ ನೀಡಿದ್ದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಕೇರಳಿಗರ ಪ್ರೀತಿಗೆ ಸಾಮಾಜಿಕ ಜಾಲತಾಣದಲ್ಲಿ ಕೃತಜ್ಞತೆ ಸಲ್ಲಿಸಿದ್ದಾರೆ. ಕೇರಳ ತಲುಪಿದಾಗ ಹೆಮ್ಮೆಪಟ್ಟುಕೊಂಡೆ.
ಶತಮಾನಗಳ ಹಿಂದೆ ಭಾರತದ ನಾಲ್ಕು ಮೂಲೆಗಳಲ್ಲಿ ನಾಲ್ಕು ಪೀಠಗಳನ್ನು ಸ್ಥಾಪಿಸಿ ಸಾಂಸ್ಕೃತಿಕ ಏಕತೆಯ ಸಂದೇಶ ರವಾನಿಸಿದವರು ಜಗದ್ಗುರು ಆದಿ ಶಂಕರಾಚಾರ್ಯರು.
ಅಂತಹ ಮಹಾನ್ ದಾರ್ಶನಿಕರ ಮಣ್ಣಿಗೆ ಪಾದಾರ್ಪಣೆ ಅವಕಾಶಕ್ಕೆ ಹಾಗೂ ಇಂತಹ ಮಣ್ಣಿನಲ್ಲಿ ಜನಿಸಿದ ಪ್ರತಿಯೊಬ್ಬರಿಗೂ ಅಭಿನಂದನೆ ಮತ್ತು ಗೌರವ ಸಲ್ಲಿಸುತ್ತೇನೆ ಎಂದವರು ಬರೆದಿದ್ದಾರೆ. ಭಾನುವಾರ ಕಾಸರಗೋಡು ಜಿಲ್ಲಾ ಹಿಂದು ಸಮಾಜೋತ್ಸವ ಸಮಿತಿ ಉಡುಗೊರೆಯಾಗಿ ನೀಡಿದ್ದ ಯಕ್ಷಗಾನ ಪುತ್ಥಳಿಯ ಚಿತ್ರವನ್ನೂ ಅವರು ಹಂಚಿಕೊಂಡಿದ್ದಾರೆ. ಯಕ್ಷಗಾನ ಬೊಂಬೆ ಯಾಟ ಕಲಾವಿದ ಕೆ.ವಿ.ರಮೇಶ್ ಈ ಬೊಂಬೆಯನ್ನು ಸಿದ್ಧಪಡಿಸಿದ್ದರು.