

ಎಂ.ಕೆ.ಹುಬ್ಬಳ್ಳಿ: ಬಿಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಚನ್ನಮ್ಮನ ಕಿತ್ತೂರು ತಾಲೂಕಿನಿಂದ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿದ್ದ ನನಗೆ ಹೆಚ್ಚಿನ ಮತ ನೀಡಿ ಬೆಂಬಲಿಸಿದ, ಪಿಕೆಪಿಎಸ್ಗಳ ಆಡಳಿತ ಮಂಡಳಿಗಳ ಸಹಕಾರ ನಾನು ಎಂದಿಗೂ ಮರೆಯಲಾರೆ ಎಂದು ಶಾಸಕ ಬಾಬಾಸಾಹೇಬ ಪಾಟೀಲ ಸಹೋದರ, ನಾನಾಸಾಹೇಬ ಪಾಟೀಲ ಹೇಳಿದರು.
ಸಮೀಪದ ಹೊಸಕಾದರವಳ್ಳಿಯ ಪಕ್ಕದೇಶಿ ಫಾಮ್ರ್ಹೌಸ್ನಲ್ಲಿ ಸೋಮವಾರ ಅಭಿಮಾನಿಗಳು, ಮುಖಂಡರು ಮತ್ತು ಕಾರ್ಯಕರ್ತರು ಹಮ್ಮಿಕೊಂಡಿದ್ದ ಸತ್ಕಾರ ಸಮಾರಂಭದಲ್ಲಿ ಮಾತನಾಡಿದರು. ನಿರ್ದೇಶಕ ಸ್ಥಾನದ ಆಯ್ಕೆಗೆ ತಾಲೂಕಿನ ಪಿಕೆಪಿಎಸ್ಗಳು ಪಾತೀತವಾಗಿ ಸಹಕರಿಸಿದ್ದಾರೆ. ಪಿಕೆಪಿಎಸ್ಗಳ ಅಭಿವದ್ಧಿ ಜತೆಗೆ ರೆತರಿಗೆ ಅಗತ್ಯ ಸೌಲಭ್ಯ ಕಲ್ಪಿಸುವ ಗುರಿ ನನ್ನದು ಎಂದರು.
ನಿವತ್ತ ಪ್ರಾಚಾರ್ಯ ಗಂಗಾಧರ ಕೋಟಗಿ ಅಧ್ಯತೆ ವಹಿಸಿದ್ದರು. ಜಗದೀಶ್ವರಯ್ಯ ಚರಂತಿಮಠ ಸಾನ್ನಿಧ್ಯ ವಹಿಸಿದ್ದರು. ಕಾಂಗ್ರೆಸ್ ಬ್ಲಾಕ್ ಅಧ್ಯ ಸಂಗನಗೌಡ ಪಾಟೀಲ, ಶಿವಯೋಗಿಗೌಡ ಪಾಟೀಲ, ಪ್ರಕಾಶಗೌಡ ಪಾಟೀಲ, ಸಣ್ಣಪ್ಪ ರಾಮರಾವ, ಸಾಗರ ದೇಸಾಯಿ, ಉಮೇಶ ಕೋಟಗಿ, ಶ್ರೀಕಾಂತ ಹಣಬರಟ್ಟಿ, ಗಂಗಪ್ಪ ಧರೆಣ್ಣವರ, ಚಂದ್ರಯ್ಯ ವಣ್ಣೂರ ಇತರರಿದ್ದರು.