ತಮ್ಮಡಿಹಳ್ಳಿಯಲ್ಲಿ ವಿಶ್ವಕರ್ಮ ರಾಜಬೀದಿ ಉತ್ಸವ

17 smg 16
Published on

ಶಿವಮೊಗ್ಗ: ತಾಲೂಕಿನ ತಮ್ಮಡಿಹಳ್ಳಿ ಗ್ರಾಮದಲ್ಲಿ ವಿಶ್ವಕರ್ಮ ಸಮಾಜದಿಂದ ಶ್ರೀ ವಿಶ್ವಕರ್ಮ ಜಯಂತ್ಯುತ್ಸವ ಅಂಗವಾಗಿ ಶನಿವಾರ ರಾಜಬೀದಿ ಉತ್ಸವ ನೂರಾರು ಗ್ರಾಮಸ್ಥರು ಸಮ್ಮುಖದಲ್ಲಿ ಅದ್ಧೂರಿ ನೆರವೇರಿತು.

ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವೃತ್ತದಿಂದ ಆರಂಭಗೊಂಡ ಉತ್ಸವಕ್ಕೆ ಜಿಪಂ ಮಾಜಿ ಸದಸ್ಯ ಎಂ.ಇ.ನಾಗರಾಜ್ ಚಾಲನೆ ನೀಡಿದರು. ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕಾಳಮ್ಮ ದೇವಿ ದೇವಸ್ಥಾನದವರೆಗೆ ಸಾಗಿದ ರಾಜಬೀದಿ ಉತ್ಸವದಲ್ಲಿ ನೂರಾರು ಗ್ರಾಮಸ್ಥರು ಪಾಲ್ಗೊಂಡಿದ್ದರು. ಯುವಕರು, ಮಕ್ಕಳು ವಾದ್ಯ ಮೇಳದ ತಾಳಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದರು.

ತಮ್ಮಡಿಹಳ್ಳಿ ಗ್ರಾಪಂ ಅಧ್ಯಕ್ಷೆ ಪ್ರತಿಭಾ, ಉಪಾಧ್ಯಕ್ಷ ಟಿ.ಜಿ.ನಾಗರಾಜ್, ಸದಸ್ಯರಾದ ಟಿ.ಎನ್.ಸೋಮಶೇಖರ್, ಟಿ.ಜಿ.ಪ್ರಕಾಶ್, ಗ್ರಾಮಸ್ಥರಾದ ಟಿ.ಕೆ.ಹರೀಶ್, ವೆಂಕೋಬಾಚಾರಿ, ಟಿ.ಎಚ್.ಚಂದ್ರ, ಟಿ.ಡಿ.ತಿಮ್ಮಯ್ಯ, ಟಿ.ಎನ್.ಸತೀಶ್, ಲಕ್ಷ್ಮಮ್ಮ, ಯಲ್ಲಮ್ಮ, ನಾಗಮ್ಮ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net