ತಮಿಳು ಸಮುದಾಯದವರಿಂದ ತಂಪಿನ ಪೂಜೆ

PHOTO-2025-07-03-18-38-38
ಶ್ರೀ ವಾರಾಹಿ ಮತ್ತು ಮಾರಮ್ಮನವರ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ತಮಿಳು ಸಮುದಾಯದವರು ಮೆರವಣಿಗೆ ಮೂಲಕ ದೇಗುಲಕ್ಕೆ ತೆರಳಿ ತಪ್ಪಿನ ಪೂಜೆ ಸಲ್ಲಿಸಿದರು.
Published on

ಎಚ್.ಡಿ.ಕೋಟೆ: ಪಟ್ಟಣದಲ್ಲಿ ವಾರದಿಂದ ನಡೆಯುತ್ತಿರುವ ಶ್ರೀ ವಾರಾಹಿ ಮತ್ತು ಮಾರಮ್ಮನವರ ಜಾತ್ರಾ ಮಹೋತ್ಸವದ ಅಂಗವಾಗಿ ಕೊಂಡೋತ್ಸವ ಜರುಗಿದ ಬಳಿಕ ವಿವಿಧ ಸಮುದಾಯದವರು ತಂಪಿನ ಪೂಜೆ ಸಲ್ಲಿಸಿದ್ದು, ಗುರುವಾರ ತಮಿಳು ಸಮುದಾಯದವರಿಂದ ತಂಪಿನ ಪೂಜೆ ನೆರವೇರಿತು.

ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ನೆಲೆಸಿರುವ ತಮಿಳು ಸಮುದಾಯದವರು ಪಟ್ಟಣಕ್ಕೆ ಆಗಮಿಸಿ ಪಟ್ಟಣದಲ್ಲಿರುವ ಗಣೇಶ ದೇವಾಲಯದಿಂದ ಮೆರವಣಿಗೆ ಹೊರಟು ಬಸ್ ನಿಲ್ದಾಣದ ಮೂಲಕ ತೆರಳಿ ಮೊದಲನೇ ಮುಖ್ಯ ರಸ್ತೆಯಲ್ಲಿರುವ ಮಾರಮ್ಮ ದೇವಾಲಯ ತಲುಪಿದರು. ಆ ಬಳಿಕ ದೇವಾಲಯದಲ್ಲಿ ತಂಪಿನ ಪೂಜೆ ನೆರವೇರಿಸಿದರು. ನಂತರ ತಮಿಳು ಸಮುದಾಯದ ವತಿಯಿಂದ ಮೊದಲನೇ ಮುಖ್ಯರಸ್ತೆಯಲ್ಲಿರುವ ಹನುಮಂತನ ದೇವಾಲಯದಲ್ಲಿ ಪ್ರಸಾದ ವಿನಿಯೋಗ ಮಾಡಲಾಯಿತು.

ತಂಪಿನ ಪೂಜೆ ವಿಶೇಷ : ಮಹಿಳೆಯರು ಅಕ್ಕಿ ತಂಬಿಟ್ಟು, ಎಳ್ಳು ತಂಬಿಟ್ಟು, ಗಣಗಲೆ ಹೂವಿನಿಂದ ಮಾಡಿದ ಹಾರ, ಬಣ್ಣ ಬಣ್ಣದ ಹೂಗಳನ್ನು ತಂದು ತಾಲೂಕಿನಲ್ಲಿ ಮಳೆ-ಬೆಳೆ ಉತ್ತಮವಾಗಿರಲಿ, ಎಲ್ಲರೂ ಸೌಖ್ಯದಿಂದಿರಲಿ ಎಂದು ವಿಶೇಷವಾಗಿ ಪೂಜೆ ಸಲ್ಲಿಸಿದು ವಾಡಿಕೆ. ಅಂದರಂತೆ ಗುರುವಾರ ಭಕ್ತರು ದೇವಾಲಯದ ಬಳಿ ಪೂಜೆ ಸಲ್ಲಿಸಿ, ಆ ಬಳಿಕ ತಂಬಿಟ್ಟನ್ನು ನೆರೆಯೊರೆಯವರಿಗೆ ಹಂಚಿ ಸಂಭ್ರಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net