ತಲಪಾಡಿ ಗಡಿಯಿಂದ ಮಕ್ಕಳಿಗೆ ಬಸ್ ವ್ಯವಸ್ಥೆ

tweet new
Published on

ಮಂಗಳೂರು: ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ದ.ಕ ಜಿಲ್ಲೆಯ ಕಾಸರಗೋಡು ಗಡಿಭಾಗದಿಂದ ಆಗಮಿಸಿದ ವಿದಾರ್ಥಿಗಳ ಫೋಟೋ ಸಹಿತ ಮಾಹಿತಿಯನ್ನು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಕರ್ನಾಟಕದಲ್ಲಿ ಓದುತ್ತಿರುವ ಕೇರಳದ ಗಡಿಗ್ರಾಮಗಳಿಂದ 367 ವಿದ್ಯಾರ್ಥಿಗಳು ಮೊದಲ ದಿನದ ಪರೀಕ್ಷೆಗೆ ಹಾಜರಾಗಿದ್ದಾರೆ. ಅವರನ್ನು ತಲಪಾಡಿ ಚೆಕ್‌ಪೋಸ್ಟ್‌ನಿಂದ ಬಸ್‌ನಲ್ಲಿ ಕರೆ ತರುತ್ತಿರುವ ದೃಶ್ಯ’ ಎಂದು ಟ್ವಿಟ್ವರ್‌ನಲ್ಲಿ ಅವರು ಬರೆದುಕೊಂಡಿದ್ದಾರೆ. ಗಡಿಭಾಗದಿಂದ ಮಕ್ಕಳನ್ನು ಕರೆದುಕೊಂಡು ಬರುವ ಶಿಕ್ಷಣ ಇಲಾಖೆ ಮುತುವರ್ಜಿಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಚಿವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಖಾಸಗಿ ಶಾಲೆಗಳು ತಮ್ಮದೇ ಶಾಲಾ ವಾಹನಗಳ ಮೂಲಕ ವಿದ್ಯಾರ್ಥಿಗಳನ್ನು ಕರೆದುಕೊಂಡು ಬಂದರೆ, ಸರ್ಕಾರಿ ಶಾಲಾ ಮಕ್ಕಳನ್ನು ಜಿಲ್ಲಾಡಳಿತ 59 ಬಸ್‌ಗಳ ಮೂಲಕ ಆಯಾ ಪರೀಕ್ಷಾ ಕೇಂದ್ರಗಳಿಗೆ ಕರೆತಂದು ಪರೀಕ್ಷೆ ಬಳಿಕ ವಾಪಸ್ ಕಳುಹಿಸಿಕೊಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net