ಪಠ್ಯದ ಜತೆಗೆ ಮಾನವೀಯ ಮೌಲ್ಯ ಕಲಿಸಿ

28Huk2
Published on

ಹುಕ್ಕೇರಿ: ಸುಶಿಕ್ಷಿತ ಸಮುದಾಯ ನಿರ್ಮಾಣ ಶಿಕ್ಷಣದ ಧ್ಯೇಯ. ಶಿಕ್ಷಕರು ಮಕ್ಕಳಿಗೆ ಪಠ್ಯದ ಜತೆಗೆ ಮಾನವೀಯ ಮೌಲ್ಯ ಕಲಿಸಬೇಕು ಎಂದು ಪುರಸಭೆ ಅಧ್ಯಕ್ಷ ಇಮ್ರಾನ್ ಮೋಮಿನ ಹೇಳಿದರು.

ಪಟ್ಟಣದ ಸರ್ಕಾರಿ ಉರ್ದು ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳಿಗೆ ಶಾಲಾ ಗುರುತಿನ ಚೀಟಿ ವಿತರಣಾ ಸಮಾರಂಭದಲ್ಲಿ ಮಾತನಾಡಿ, ವಿದ್ಯಾರ್ಥಿಗಳ ಜೀವನ ಶೈಲಿ ಸುಧಾರಿಸಿ ಉತ್ತಮ ಸಮುದಾಯ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯವಾಗಿದೆ. ಇಂದಿನ ವಿದ್ಯಾರ್ಥಿಗಳು ಮುಂದೆ ದೇಶದ ಉತ್ತಮ ಪ್ರಜೆಗಳು, ಶಿಕ್ಷಣ ಕ್ಷೇತ್ರದಲ್ಲಿ ಅಭಿವದ್ಧಿ ಸಾಧಿಸಿದಲ್ಲಿ ಮಾತ್ರ ದೇಶದ ಅಭಿವದ್ಧಿ ಸಾಧ್ಯ. ಶಾಲೆಗೆ ಬೇಕಾಗುವ ಎಲ್ಲ ಸರ್ಕಾರಿ ಸೌಲಭ್ಯ ನೀಡಲಾಗಿದ್ದು, ಮೂಲ ಸೌಕರ್ಯ ಶೀಘ್ರದಲ್ಲಿ ಒದಗಿಸಲಾಗುವುದು ಎಂದರು.

ಪುರಸಭೆಗೆ ಅಧ್ಯಕ್ಷರಾಗಿ ಆಯ್ಕೆಯಾದ ಇಮ್ರಾನ ಮೋಮಿನ ಅವರನ್ನು ಸನ್ಮಾನಿಸಲಾಯಿತು. ಎಸ್‌ಡಿಎಂಸಿ ಅಧ್ಯಕ್ಷ ಮಹ್ಮದ್‌ರಫೀಕ್ ಮುಜಾವರ, ಉಪಾಧ್ಯಕ್ಷ ಇಸ್ಮಾಯಿಲ್ ಮಕಾನದಾರ, ರಜಾಕ್ ಮುಜಾವರ, ಅಬ್ದುಲ್ ಕರಿಮ್ ಮಕಾನದಾರ, ಹೈದರಲಿ ಮೋಮಿನದಾದಾ, ರ್ಇಾನ್ ಪೀರಜಾದೆ, ಖುಂದವೀರ ಚೌಧರಿ, ಮುಖ್ಯೋಪಾಧ್ಯಾಯ ಬೀಬಿ ತಬಸುಮ್ ಪೀರಜಾದೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net