ಪಠ್ಯಪುಸ್ತಕ ವಿತರಿಸದ ಪ್ರಾಚಾರ್ಯಗೆ ಜಿಪಂ ಸಿಇಒ ತರಾಟೆ

Kavital Ceo
ವಟಗಲ್ ಮುರಾರ್ಜಿ ಶಾಲೆಯಲ್ಲಿ ಪುಸ್ತಕಗಳನ್ನು ವಿತರಿಸದ ಪ್ರಾಚಾರ್ಯ, ಸಿಬ್ಬಂದಿಯನ್ನು ಜಿಪಂ ಸಿಇಒ ಈಶ್ವರ ಕುಮಾರ ಕಾಂದೂ ತರಾಟೆಗೆ ತೆಗೆದುಕೊಂಡರು. ಪ್ರಾಚಾರ್ಯ ಮಹಾಂತೇಶ, ತಾಪಂ ಇಒ ಅಮರೇಶ ಯಾದವ, ಪಿಡಿಒ ತಿಮ್ಮಣ್ಣ, ತಾಪಂ ಎಡಿಗಳಾದ ಶಿವಾನಂದ, ಸೋಮನಗೌಡ ಇತರರಿದ್ದರು.
Published on

ಕವಿತಾಳ: ಸಮೀಪದ ವಟಗಲ್‌ನ ಮುರಾರ್ಜಿ ವಸತಿ ಶಾಲೆಗೆ ಜಿಪಂ ಸಿಇಒ ಈಶ್ವರ ಕುಮಾರ ಕಾಂದೂ ಗುರುವಾರ ದಿಢೀರ್ ಭೇಟಿ ನೀಡಿದಾಗ, ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳನ್ನು ವಿತರಿಸದೇ ಒಂದೆಡೆ ರಾಶಿ ಹಾಕಿದ್ದನ್ನು ಕಂಡು ಕೆಂಡಾಮಂಡಲವಾದರು.

ರಾಶಿ ರಾಶಿ ಪುಸ್ತಕಗಳನ್ನು ನೋಡಿದ ಸಿಇಒ, ಇಲ್ಲಿ ಏಕೆ ಇರಿಸಿದ್ದೀರಿ ಎಂದು ಪ್ರಶ್ನಿಸಿದರು. ಅದಕ್ಕೆ ಪ್ರಾಚಾರ್ಯ ಮಹಾಂತೇಶ, ವಿದ್ಯಾರ್ಥಿಗಳಿಗೆ ವಿತರಣೆ ಮಾಡುವ ಸಲುವಾಗಿ ಇಡಲಾಗಿದೆೆ ಎಂದು ಉತ್ತರಿಸಿದರು. ಎರಡು ತಿಂಗಳಾದರೂ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ವಿತರಿಸದಿದ್ದರೆ ಹೇಗೆ? ಎಂದು ಪ್ರಾಚಾರ್ಯರನ್ನು ತರಾಟೆಗೆ ತೆಗೆದುಕೊಂಡು ನಿಮ್ಮ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಪ್ರಾಚಾರ್ಯ, ಸಿಬ್ಬಂದಿ, ಕಂಪ್ಯೂಟರ್ ಹಾಗೂ ಇತರ ಕಾರಣಕ್ಕೆ ನಾಲ್ಕು ಕೊಠಡಿ ಉಪಯೋಗಿಸಿದರೆ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಮಸ್ಯೆಯಾಗುವುದಿಲ್ಲವೇ?. ವಿದ್ಯಾರ್ಥಿಗಳಿಗೆ ಕೊಠಡಿ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ಎಚ್ಚರಿಸಿದರು.

ನಂತರ ವಿದ್ಯಾರ್ಥಿಗಳ ಕೊಠಡಿಗಳಿಗೆ ತೆರಳಿ ಪರಿಶೀಲಿಸಿದರು. ಎಲ್ಲ ಸಿಬ್ಬಂದಿ ಸರಿಯಾಗಿ ಕೆಲಸ ಮಾಡಬೇಕು. ಇಲ್ಲದಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ತಾಪಂ ಇಒ ಅಮರೇಶ ಯಾದವ, ಪಿಡಿಒ ತಿಮ್ಮಣ್ಣ, ತಾಪಂ ಎಡಿಗಳಾದ ಶಿವಾನಂದ, ಸೋಮನಗೌಡ ಇತರರಿದ್ದರು. ತದನಂತರ ಪಾಮನಕಲ್ಲೂರು ಪಿಎಚ್‌ಸಿ, ಸರ್ಕಾರಿ ಪ್ರೌಢಶಾಲೆ, ವಸತಿ ನಿಯಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net