ಕನ್ನಾಳ ರಸ್ತೆಯಲ್ಲಿ ಬೋನಿಗೆ ಬಿದ್ದ ಕರಡಿ

171220 Tavaragera Bear on bone
Published on

ತಾವರಗೇರಾ: ಪಟ್ಟಣ ಸಮೀಪದ ಕನ್ನಾಳ ರಸ್ತೆಯಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿದ್ದ ಕರಡಿ ಬುಧವಾರ ರಾತ್ರಿ ಬೋನಿಗೆ ಬಿದ್ದಿದೆ. ಪಟ್ಟಣದ ಸುತ್ತಲಿನ ನೀರಾವರಿ ಜಮೀನಿನಲ್ಲಿ ಹಾಕಿದ್ದ ಕಲ್ಲಂಗಡಿ, ಮೆಕ್ಕೆ ತೆನೆಗಳನ್ನು ತಿಂದು ಬೆಳೆ ಹಾಳು ಮಾಡುತಿತ್ತು.

ಅರಣ್ಯ ಇಲಾಖೆ ಅಧಿಕಾರಿಗಳು ಕರಡಿಯನ್ನು ಬೋನಿಗೆ ಬೀಳುವಂತೆ ರಾತ್ರಿ 10ರವರೆಗೆ ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿದ್ದಾರೆ. ಕಮಲಾಪುರ ಹತ್ತಿರದ ವಾಜಪೇಯಿ ಮೃಗಾಲಯಕ್ಕೆ ಗುರುವಾರ ಬೆಳಗ್ಗೆ ಅರಣ್ಯ ಇಲಾಖೆ ಸಿಬ್ಬಂದಿ ಹಸ್ತಾಂತರಿಸಿದರು. ಜಿಲ್ಲಾ ಸಹಾಯಕ ಅರಣ್ಯಾಧಿಕಾರಿ ಎಸ್. ವೈ.ಬೀಳಗಿ, ವಲಯ ಅರಣ್ಯಾಧಿಕಾರಿ ಅನ್ವರ್, ಸಹಾಯಕ ಅರಣ್ಯಾಧಿಕಾರಿಗಳಾದ ರಿಯಾಜ್, ಶಿವಶಂಕರ್ ರ‌್ಯಾವಣಕಿ, ಅರಣ್ಯ ರಕ್ಷಕರು ಕಾರ್ಯಾಚರಣೆಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net