ಜ್ಞಾನಬುತ್ತಿ ಸಂಸ್ಥೆಯಲ್ಲಿ ಟಿಇಟಿ ಅಧ್ಯಯನ ಪುಸ್ತಕ ಬಿಡುಗಡೆ

' institute
Published on

ಮೈಸೂರು: ಶಿಕ್ಷಕ ವೃತ್ತಿಯನ್ನು ಆಳವಾಗಿ ತೊಡಗಿಸಿಕೊಂಡಾಗ ಬದುಕಿನಲ್ಲಿ ಸಂತಸ ಕಾಣಸಿಗುತ್ತದೆ ಎಂದು ವಾಗ್ಮಿ ಎಂ. ಕೃಷ್ಣೇಗೌಡ ಅಭಿಪ್ರಾಯಪಟ್ಟರು.

ಜ್ಞಾನಬುತ್ತಿ ಸಂಸ್ಥೆ ನಗರದ ಲಕ್ಷ್ಮೀಪುರಂ ಸರ್ಕಾರಿ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಬುಧವಾರ ಏರ್ಪಡಿ ಸಿದ್ದ ಶಿಕ್ಷಕರ ಅರ್ಹತಾ ಪರೀಕ್ಷೆಯ (ಟಿಇಟಿ) ಉಚಿತ ತರಬೇತಿ ಶಿಬಿರದ ಶಿಬಿರಾರ್ಥಿಗಳಿಗೆ ಶುಭಹಾರೈಸಿ ಮಾತನಾಡಿ, ಕೆಲಸವನ್ನು ಅಧ್ಯಾಪಕರಾದವರು ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ನೋಡಬೇಕು. ಕೆಲಸವನ್ನು ಆಸ್ವಾದಿಸುವ ಮನಸ್ಸು ಇರಬೇಕು. ಮಾಡುವ ಕೆಲಸದಲ್ಲಿ ಪ್ರಾಮಾಣಿಕತೆ ಇದ್ದರೆ ಯಶಸ್ಸು ಸಾಧ್ಯ. ನಮ್ಮ ವಿಶ್ವವಿದ್ಯಾಲಯಗಳು ಸೆಲೆಬ್ರಿಟಿ ಶಿಕ್ಷಣದ ಬದಲಿಗೆ ಮೂಲ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ತರಬೇತಿಗಳು ಉದ್ಯೋಗವನ್ನು ತಂದು ಕೊಡಬಹುದು. ಆದರೆ ಮೂಲ ಶಿಕ್ಷಣವು ಸಂಸ್ಕಾರ ಮತ್ತು ಸಮಾಜಮುಖಿ ಕೆಲಸಗಳನ್ನು ಮಾಡಲು ಪ್ರೇರಣೆ ನೀಡುತ್ತದೆ ಎಂದರು.

ರಾಜ್ಯೋತ್ಸವ ಪ್ರಶಸ್ತಿ ನನಗೆ ಬಂತು ಎನ್ನುವುದಕ್ಕಿಂತ ಕನ್ನಡದ ಸೇವೆಗೆ ಸಿಕ್ಕಿತು ಎಂದು ಭಾವಿಸುತ್ತೇನೆ. ನನಗೆ ಕನ್ನಡವೇ ಸರ್ವಸ್ವವಾಗಿದೆ. 65ಕ್ಕಿಂತ ಹೆಚ್ಚು ಬಾರಿ ವಿದೇಶಗಳನ್ನು ಸುತ್ತುವುದಕ್ಕೆ ಅವಕಾಶ ಒದಗಿಸಿಕೊಟ್ಟದ್ದೇ ಈ ಭಾಷೆ. ಕನ್ನಡವು ನನ್ನನ್ನು ವಿಶ್ವಕ್ಕೆ ಪರಿಚಯಿಸಿತು. ಕನ್ನಡದಿಂದಲೇ ನಾನು ಖ್ಯಾತನಾದೆ, ಈ ಭಾಷೆ ನನಗೆ ಎಲ್ಲವನ್ನು ನೀಡಿದೆ. ಕನ್ನಡದಿಂದ ಎಲ್ಲವನ್ನೂ ಗಳಿಸಬಹುದು ಎನ್ನವುದಕ್ಕೆ ನಾನೇ ಉದಾಹರಣೆ ಎಂದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಡಾ.ಎ. ಖಾದರ್ ಪಾಷ ಅವರು ಜ್ಞಾನಬುತ್ತಿ ಹೊರತಂದಿರುವ ಶಿಕ್ಷಕರ ಅರ್ಹತಾ ಪರೀಕ್ಷೆ(ಟಿಇಟಿ)ಯ ಅಧ್ಯಯನ ಪುಸ್ತಕವನ್ನು ಬಿಡುಗಡೆ ಮಾಡಿದರು. ಜ್ಞಾನಬುತ್ತಿಯಲ್ಲಿ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ವಿಭಾಗದ ಅಧ್ಯಕ್ಷರನ್ನಾಗಿ ಹಿರಿಯ ಕೆಎಎಸ್ ಅಧಿಕಾರಿ ಆಶಾದ್ ಆರ್. ಷರೀಫ್ ಅವರನ್ನು ಆಯ್ಕೆಮಾಡಲಾ ಯಿತು. ವೇದಿಕೆಯಲ್ಲಿ ಸಂಸ್ಥೆಯ ಪ್ರಧಾನ ಕಾಯದರ್ಶಿ ಜೈನಹಳ್ಳಿ ಸತ್ಯನಾರಾಯಣ ಗೌಡ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net