ಕ್ಲಾಸಿಕ್‌ನಲ್ಲಿ ಟಿಇಟಿ ಉಚಿತ ಕಾರ್ಯಾಗಾರ

workshop
Published on

ಧಾರವಾಡ: ನಗರದ ಕ್ಲಾಸಿಕ್ ಕೆಎಎಸ್, ಐಎಎಸ್ ಸ್ಟಡಿ ಸರ್ಕಲ್ ಸಂಸ್ಥೆಯಲ್ಲಿ ಜು. 23ರಂದು ಮಧ್ಯಾಹ್ನ 12ಗಂಟೆಗೆ 6ರಿಂದ 8ನೇ ತರಗತಿ ಬೋಧಿಸುವ ಶಿಕ್ಷಕರ ನೇಮಕಾತಿಗಾಗಿ ನಡೆಸುವ ಟಿಇಟಿ (ಶಿಕ್ಷಕರ ಅರ್ಹತಾ ಪರೀಕ್ಷೆ) ಕುರಿತು ಉಚಿತ ಮಾಹಿತಿ ಕಾರ್ಯಾಗಾರವನ್ನು ಸಪ್ತಾಪುರ ವೃತ್ತ ಬಳಿಯ ಸಂಸ್ಥೆಯ ಯೂನಿಟ್ ಎ ದಲ್ಲಿ ಆಯೋಜಿಸಲಾಗಿದೆ.

ಅನುಭವಿ ಸಂಪನ್ಮೂಲ ವ್ಯಕ್ತಿಗಳು ಮಾರ್ಗದರ್ಶನ ನೀಡುವರು. ಪರೀಕ್ಷಾ ಸಿದ್ಧತೆ ನಡೆಸಿರುವ ಅಭ್ಯರ್ಥಿಗಳು ಕಾರ್ಯಾಗಾರದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕ್ಲಾಸಿಕ್ ಸಮೂಹ ಸಂಸ್ಥೆಗಳ ನಿರ್ದೇಶಕ ಲಕ್ಷ್ಮ್ಮಣ ಉಪ್ಪಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net