ಎಂದಿಗೂ ಭಯೋತ್ಪಾದನೆ ಸಹಿಸಲ್ಲ

KND-TIRANGA
Published on

ಕುಂದಗೋಳ: ನಮ್ಮ ದೇಶದ ಸೇನಾನಿಗಳು ಆಪರೇಷನ್ ಸಿಂಧೂರ ಯಶಸ್ಸಿಗೆ ಕಾರಣರಾಗಿದ್ದಾರೆ. ಮೋದಿಯವರ ನಾಯಕತ್ವವೂ ಬಲಿಷ್ಠವಾಗಿದೆ. ನಾವು ಎಂದಿಗೂ ಭಯೋತ್ಪಾದನೆಯನ್ನು ಸಹಿಸುವುದಿಲ್ಲ ಎಂಬ ಸಂದೇಶವನ್ನು ಈ ಮೂಲಕ ನೀಡುತ್ತಿದ್ದೇವೆ ಹಾಗೂ ಉಗ್ರರಿಗೆ ಕೈ ಜೋಡಿಸಿದ ಪಾಪಿ ಪಾಕಿಸ್ತಾನ ಸದ್ಯ ದಿವಾಳಿಯಾಗಿದೆ ಎಂದು ಶಾಸಕ ಎಂ.ಆರ್. ಪಾಟೀಲ ಹೇಳಿದರು.

ಆಪರೇಷನ್ ಸಿಂಧೂರ ಯಶಸ್ವಿ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಭಾರತೀಯ ಸೈನಿಕರಿಗೆ ಆತ್ಮಸ್ಥೈರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಪಟ್ಟಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬೃಹತ್ ತಿರಂಗಾ ಯಾತ್ರೆಗೆ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.</p><p>ಪಂಚಗ್ರಹ ಹಿರೇಮಠದ ಶಿಥಿಕಂಠೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ ಮಾತನಾಡಿ, ಪಾಕಿಸ್ತಾನ ಮತ್ತೊಮ್ಮೆ ಉದ್ಧಟತನ ತೋರಿದರೆ ನಮಗೂ ಬಂದೂಕು ಕೊಡಿ ನಾವು ಯುದ್ಧಕ್ಕೆ ಬರಲು ಸಿದ್ಧರಿದ್ದೇವೆ ಎಂದು ಎಚ್ಚರಿಕೆ ನೀಡಿದರು.

ನಂತರ ಮಾಜಿ ಸೈನಿಕ ಜಿ. ಪರಶುರಾಮ ಮಾತನಾಡಿದರು. ಸಿಂಧೂರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಕೆಲ ಸೈನಿಕರು ಹಾಗೂ ಮಾಜಿ ಸೈನಿಕರನ್ನು ಕಲ್ಯಾಣಪುರ ಮಠದ ಶ್ರೀ ಅಭಿನವ ಬಸವಣ್ಣಜ್ಜನವರು, ಶಿವಾನಂದ ಮಠದ ಶಿವಾನಂದ ಮಹಾಸ್ವಾಮಿಗಳು ಹಾಗೂ ಗಣ್ಯಮಾನ್ಯರು ಸನ್ಮಾನಿಸಿದರು.

ತಿರಂಗಾ ಯಾತ್ರೆಯಲ್ಲಿ ಅರ್ಧ ಕಿಮೀ ಉದ್ದದ ರಾಷ್ಟ್ರಧ್ವಜ ಹಿಡಿದು ‘ಬೋಲೋ ಭಾರತ ಮಾತಾಕಿ ಜೈ’ ಘೊಷಣೆ ಕೂಗಲಾಯಿತು.

ಮಾಜಿ ಸೈನಿಕರಾದ ನಿಂಗಪ್ಪ ಸಿಂಗೊಟಿ, ಜಿ. ಪರಶುರಾಮ, ಎಸ್.ವಿ. ಹುಬ್ಬಳ್ಳಿ, ಶಂಕರಗೌಡ ಪಾಟೀಲ, ಗದಗಯ್ಯ ಹಿರೇಮಠ, ಗದಿಗೆಪ್ಪ ಹುಬ್ಬಳ್ಳಿ, ರವಿ ರೋಡೆ, ಗುರುನಾಥ ಭೋವಿ, ಮಂಜುನಾಥ ಅಳಗವಾಡಿ, ವಿನಯ ಸೊರಟಿ ಹಾಗೂ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಧಾರವಾಡ ಜಿಲ್ಲಾ ಘಟಕರ ಪದಾಧಿಕಾರಿಗಳು ಇದ್ದರು.

ಹಿರಿಯ ವಕೀಲರಾದ ಸಿ.ಎಂ. ಕಾಳೆ, ನಿವೃತ್ತ ಸೈನಿಕರು, ವಕೀಲರು, ರೈತ ಮುಖಂಡರು, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ನಿಂಗಪ್ಪ ಸುತಗಟ್ಟಿ, ಈರಣ್ಣ ಜಡಿ, ನಾಗನಗೌಡ ಸಾತ್ಮಾರ, ಪಪಂ ಅಧ್ಯಕ್ಷ ಶ್ಯಾಮಸುಂದರ ದೇಸಾಯಿ, ನಾಗರಾಜ ದೇಶಪಾಂಡೆ, ಪ್ರವೀಣ ಬಡ್ನಿ, ಬಿ.ಟಿ. ಗಂಗಾಯಿ, ಸತೀಶ ಪಾಟೀಲ, ಪ್ರಕಾಶಗೌಡ ಪಾಟೀಲ, ಮಂಜುನಾಥ ಹರಿಜನ, ಗೋಪಾಲ ದೊಡ್ಡಮನಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net