

ಮಡಿಕೇರಿ:
ಕೊಡಗಿನ ಕುಶಾಲನಗರದಲ್ಲಿ ಈಗ ‘ಬಾಂಗ್ಲಾದ ಭಯೋತ್ಪಾದಕ’ರ ಸದ್ದು ಜೋರಾಗಿ ಕೇಳಿ ಬರುತ್ತಿದೆ. ಸ್ಥಳೀಯ ತಾವರೆಕೆರೆ ಈ ‘ಭಯೋತ್ಪಾದಕ’ರಿಂದಾಗಿ ಸಂಪೂರ್ಣ ನೀಲವರ್ಣಕ್ಕೆ ತಿರುಗಿದೆ. ಮೇಲ್ನೋಟಕ್ಕೆ ಇದೊಂದು ಆಕರ್ಷಕ ದೃಶ್ಯದಂತೆ ಕಂಡುಬರುತ್ತಿದ್ದರೂ ಸಂಪೂರ್ಣ ಜಲಮೂಲಕ್ಕೆ ಅಪಾಯದ ಕರೆಗಂಟೆಯಾಗಿ ಆತಂಕ ಮೂಡಿಸಿದೆ.
ಮೈಸೂರು-ಬಂಟ್ವಾಳ ರಾಷ್ಟಿçÃಯ ಹೆದ್ದಾರಿ 275ರಲ್ಲಿ ಕುಶಾಲನಗರದಿಂದ ಮಡಿಕೇರಿಗೆ ತೆರಳುವ ಮಾರ್ಗದ ಬದಿಯಲ್ಲಿ ಕುಶಾಲನಗರಕ್ಕೆ ಹೊಂದಿಕೊAಡAತೆಯೇ ತಾವರೆಕೆರೆ ಇದೆ. ಐತಿಹಾಸಿಕ ಹಿನ್ನೆಲೆ ಹೊಂದಿರುವ ಈ ಕೆರೆಯ ತುಂಬಾ ಹೆಸರಿಗೆ ತಕ್ಕಂತೆ ಮೊದಲೆಲ್ಲಾ ಬಗೆ ಬಗೆಯ ತಾವರೆ ಹೂವು ಯಥೇಚ್ಛವಾಗಿ ಕಂಗೊಳಿಸುತ್ತಿತ್ತು. ಆದರೆ ಈಗ ಸುಂದರವಾದ ನೀಲವರ್ಣದ ಹೂವು ಕೆರೆಯ ತುಂಬಾ ಹರಡಿದ್ದು ಮನಮೋಹಕವಾಗಿ ಕಾಣುತ್ತಿದೆ.
ತಾವರೆಕೆರೆ ನೀಲಿಮಯ ಆಗಿರುವುದರಿಂದ ಕಳೆದ ಕೆಲವು ದಿವಸಗಳಿಂದ ಇದೊಂದು ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. ರಸ್ತೆ ಬದಿಯಲ್ಲಿ ವಾಹನಗಳನ್ನು ನಿಲ್ಲಿಸಿ ಫೋಟೋ ತೆಗೆಯುವುದು, ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದು, ರೀಲ್ಸ್ ಮಾಡುವುದು ಸಾಮಾನ್ಯ ದೃಶ್ಯವಾಗಿದೆ. ಜನರನ್ನು ನಿಯಂತ್ರಿಸಲು ಪೊಲೀಸರನ್ನೂ ಸ್ಥಳದಲ್ಲಿ ನಿಯೋಜಿಸಲಾಗಿದೆ. ಈ ಹೂವಿನ ಅಂದಕ್ಕೆ ಮನಸೋತು ಕೆಲವರು ಇಲ್ಲಿಂದ ಗಿಡಗಳನ್ನು ಕಿತ್ತುಕೊಂಡು ತಮ್ಮ ಊರಿಗೆ ತೆಗೆದುಕೊಂಡು ಹೋಗುವುದೂ ಕಂಡುಬAದಿದೆ. ಆದರೆ ಈ ಸಸ್ಯದ ಅಪಾಯಕಾರಿ ಗುಣಗಳು ಗೊತ್ತಾದರೆ ಯಾರು ಕೂಡ ಇದರ ಹತ್ತಿರಕ್ಕೆ ಹೋಗಲಿಕ್ಕಿಲ್ಲ. ಯಾಕೆಂದರೆ ಇದು
‘ಟೆರರ್ ಆಫ್ ಬೆಂಗಾಲ್’ ಹೆಸರಿನ ಅತ್ಯಂತ ಅಪಾಯಕಾರಿ ಜಲಕಳೆ ಸಸ್ಯ.
‘ಟೆರರ್ ಆಫ್ ಬೆಂಗಾಲ್’ ಒಂದು ಚಿಕ್ಕ ಅಲಂಕಾರಿಕಾ ಸಸ್ಯವಾಗಿ ದಕ್ಷಿಣ ಅಮೇರಿಕಾ ಕಡೆಯಿಂದ ಭಾರತಕ್ಕೆ ಮೊದಲು ಕಾಲಿಟ್ಟಿತು. ಸ್ವಲ್ಪ ನೀರಿನ ಅಂಶವಿದ್ದರೂ ಸಾಕು ಈ ಗಿಡ ಸದೃಢವಾಗಿ ಬೆಳೆಯುತ್ತದೆ. ನೀರಿನ ಹರಿಯುವಿಕೆಗೆ ಸಿಲುಕಿದರೆ ಉಳಿದ ಕಡೆಗೂ ಸುಲಭವಾಗಿ ಹರಡುತ್ತದೆ. ಮೀನುಗಾರರು ಅವರ ಭಾಷೆಯಲ್ಲಿ ಅಂತರಗAಗೆ ಎಂದು ಕರೆಯುತ್ತಾರೆ. ಈ ಗಿಡಗಳು ವ್ಯಾಪಿಸಿರುವ ಕಡೆಗಳಲ್ಲಿ ಬಲೆ ಬೀಸಲೂ ಆಗುವುದಿಲ್ಲ. ಇದರ ಬೇರು ನೀರೊಳಗೆ ಒಂದಕ್ಕೊAದು ಬೆಸೆದುಕೊಂಡು ಸಮೃದ್ಧವಾಗಿ ಹರಡುತ್ತದೆ.
ಇದನ್ನು ನೀಲಿ ಭೂತ ಅಥವಾ ಬ್ಲೂ ಡೆವಿಲ್ ಎಂದು ಕೂಡ ಕರೆಯುತ್ತಾರೆ. ಆದರೆ ಈ ಗಿಡದ ಆಕ್ರಮಣಶೀಲತೆ ಗುಣದಿಂದಾಗಿ ‘ಟೆರರ್ ಆಫ್ ಬೆಂಗಾಲ್’ ಎಂದು ಗುರುತಿಸಲಾಗುತ್ತದೆ. ಈ ಗಿಡದ ಸಸ್ಯಶಾಸ್ತ್ರೀಯ ಹೆಸರು ವಾಟರ್ ಹಯಸಿಂತ್. ಇದು ನೀರಿನಲ್ಲಿ ವೇಗವಾಗಿ ಹರಡುವುದು ಮಾತ್ರವಲ್ಲದೆ ಇತರ ಜಲ ಸಸ್ಯಗಳಿಗೆ ಸೂರ್ಯನ ಬೆಳಕು ಮತ್ತು ಪೋಷಕಾಂಶಗಳು ಸಿಗದಂತೆ ಮಾಡುತ್ತದೆ.
ಈ ಸಸ್ಯ ನೀರಿನಲ್ಲಿ ಆಮ್ಲಜನಕದ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಇದು ಮೀನು ಮತ್ತು ಇತರ ಜಲಚರ ಜೀವಿಗಳಿಗೆ ಮಾರಕವಾಗಿದೆ. ಜಲಮಾರ್ಗಗಳಿಗೂ ಅಪಾಯಕಾರಿಯಾಗಿ ಪರಿಣಮಿಸಿದೆ. ಇದು ದೋಣಿ ಸಂಚಾರ ಮತ್ತು ಮೀನುಗಾರಿಕೆಗೆ ತೊಂದರೆ ಉಂಟುಮಾಡುತ್ತದೆ. ಸೊಳ್ಳೆಗಳ ಸಂತಾನೋತ್ಪತ್ತಿಗೆ ಸೂಕ್ತ ವಾತಾವರಣವನ್ನೂ ನಿರ್ಮಿಸಿಕೊಡುತ್ತದೆ. ಮಲೇರಿಯಾ ಮತ್ತು ಡೆಂಘಿಯAಥ ರೋಗಗಳ ಹರಡುವಿಕೆಗೂ ಕಾರಣವಾಗುತ್ತದೆ.
ಇಂಥ ಅಪಾಯಕಾರಿ ಜಲಸಸ್ಯ ಈಗ ಕುಶಾಲನಗರದ ಮೂಲಕ ಕೊಡಗಿಗೂ ಕಾಲಿಟ್ಟಿದ್ದು, ಭವಿಷ್ಯದಲ್ಲಿ ಜಿಲ್ಲೆಯ ಜಲಮೂಲಗಳಿಗೆ ಹರಡುವ ಆತಂಕ ಎದುರಾಗಿದೆ. ಕುಶಾಲನಗರ ಪಟ್ಟಣ ಬೆಳೆದಂತೆ ಭೂದಾಹಿಗಳು ತಾವರೆಕೆರೆಯನ್ನು ಕೆರೆಯನ್ನು ಮೂರೂ ಕಡೆಯಿಂದಲೂ ಅತಿಕ್ರಮಿಸಿಕೊಂಡಿರುವ ಆರೋಪ ಕೇಳಿಬರುತ್ತಿದ್ದು, ದಾಖಲೆಗಳಲ್ಲಿ 4 ಎಕರೆ ವಿಸ್ತೀರ್ಣದ ಮಾಹಿತಿ ಇದ್ದರೂ ಈಗ ಕೆರೆಯ ವಿಸ್ತಾರ ಚಿಕ್ಕದಾಗಿದೆ. ಸುತ್ತಲಿನ ಬಡಾವಣೆಗಳ ಕೊಳಚೆ ನೀರು ಚರಂಡಿಗಳ ಮುಖಾಂತರ ನೇರವಾಗಿ ಈ ಕೆರೆಗೆ ಸೇರುವುದರಿಂದ ಇದೊಂದು ತ್ಯಾಜ್ಯದ ಗುಂಡಿಯಾಗಿಯೂ ಬದಲಾಗಿದೆ. ಈ ತ್ಯಾಜ್ಯದಿಂದಾಗಿಯೇ ‘ಟೆರರ್ ಆಫ್ ಬೆಂಗಾಲ್’ ಇಲ್ಲಿ ಕಾಣಿಸಿಕೊಂಡಿದೆ ಎನ್ನಲಾಗುತ್ತಿದೆ.
ಭಾರಿ ಪ್ರಮಾಣದಲ್ಲಿ ತ್ಯಾಜ್ಯ ನೀರು ಸೇರ್ಪಡೆ ತಾವರೆಕೆರೆಯ ದೊಡ್ಡ ಸಮಸ್ಯೆಯಾಗಿದ್ದು, ಈ ಪ್ರದೇಶದಲ್ಲಿ ಸೊಳ್ಳೆ ಹಾವಳಿ ಉಲ್ಬಣಗೊಳ್ಳಲು ಕಾರಣವಾಗಿದೆ. ಈ ಕೆರೆಗೆ ಕೊಳಚೆ ನೀರು ಸೇರದಂತೆ ಕ್ರಮ ತೆಗೆದುಕೊಳ್ಳಬೇಕು ಎನ್ನುವುದು ಬಹಳ ಹಿಂದಿನಿAದಲೂ ಪರಿಸರಾಸಕ್ತರ ಕಳಕಳಿ ಆಗಿದ್ದರೂ ಸಂಬAಧಿಸಿದವರು ನಿರ್ಲಕ್ಷö್ಯ ತೋರಿಸುತ್ತಲೇ ಬಂದಿದ್ದಾರೆ. ನೆನೆಗುದಿಗೆ ಬಿದ್ದಿರುವ ಯುಜಿಡಿ ಕಾಮಗಾರಿ ಕೂಡ ತಾವರೆಕೆರೆ ಹಾಳಾಗಲು ಮತ್ತೊಂದು ಕಾರಣವಾಗಿದೆ.
ಇಂಗು ಗುಂಡಿಗಳ ನಿರ್ಮಾಣ, ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ ಸ್ಥಾಪನೆ ಮೂಲಕ ಸಮಸ್ಯೆಗೆ ಕಡಿವಾಣ ಹಾಕಬಹುದು ಎನ್ನುವ ಸಾರ್ವಜನಿಕರ ಸಲಹೆಗಳಿಗೂ ಬೆಲೆ ಇಲ್ಲದಂತಾಗಿದೆ. ಸಿದ್ದರಾಮಯ್ಯ ನೇತೃತ್ವದ ಈ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ತಾವರೆಕೆರೆ ಅಭಿವೃದ್ಧಿಯನ್ನು ಪ್ರವಾಸೋದ್ಯಮ ಇಲಾಖೆ ಮೂಲಕ ಮಾಡಿಸಲು ಕುಶಾಲನಗರ ನಗರ ಯೋಜನಾ ಪ್ರಾಧಿಕಾರದದಿಂದ ಪ್ರಯತ್ನ ನಡೆದಿತ್ತು. ಆದರೆ ವಿಫಲವಾಗಿತ್ತು. ಈಗ ತಾವರೆಕೆರೆ ಅಭಿವೃದ್ಧಿಗೆ ಮತ್ತೆ ಕುಶಾಲನಗರ ನಗರ ಯೋಜನ ಪ್ರಾಧಿಕಾರ ಮುಂದಾಗಿದ್ದು. ಆದಷ್ಟು ಬೇಗ ಯೋಜನೆ ಕಾರ್ಯರೂಪಕ್ಕೆ ಬರುವ ಮೂಲಕ ಐತಿಹಾಸಿಕ ಮಹತ್ವದ ಕೆರೆ ಉಳಿಸಿಕೊಳ್ಳುವಂತಾಗಲಿ ಎನ್ನುವುದು ಸ್ಥಳೀಯರ ಆಶಯ.
ಇದೊಂದು ತುಂಬಾ ಅಪಾಯಕಾರಿ ಜಲ ಕಳೆ ಸಸ್ಯ. ಈ ಗಿಡಗಳು ಸೂರ್ಯನ ಕಿರಣಗಳನ್ನು ನೀರಿನಾಳದ ತನಕ ಹೋಗಲು ಬಿಡುವುದಿಲ್ಲ. ಜಲಚರಗಳಿಗೆ ನೀರಿನಾಳದಲ್ಲಿ ಓಡಾಡಲು ಸಾಧ್ಯವಾಗದ ಸ್ಥಿತಿ ತಂದಿಡುತ್ತದೆ. ನೀರಿನ ಎಲ್ಲಾ ಪೋಷಕಾಂಶಗಳನ್ನು ಇವೇ ಖಾಲಿ ಮಾಡುತ್ತವೆ. ಇಲ್ಲಿ ಕೊಳೆಯುವಿಕೆ ಶುರುವಾಗುತ್ತದೆ. ತ್ಯಾಜ್ಯದ ಮೇಲೆ ಕುರುಚಲು ಕಾಡು ಬೆಳೆಯುತ್ತದೆ. ನಂತರ ಇದೇ ದೊಡ್ಡ ಕಾಡು ಆಗಬಹುದು. ಇದನ್ನೂ ಸಂಪೂರ್ಣವಾಗಿ ನಾಶ ಮಾಡದಿದ್ಧರೆ ಕೆರೆ ಉಳಿಯುವುದಿಲ್ಲ. ಜಲಚರಗಳೂ ಉಳಿಯುವುದಿಲ್ಲ.
ಮಿಲನಾ ಭರತ್, ಸಹಾಯಕ ನಿರ್ದೇಶಕಿ, ಮೀನುಗಾರಿಕೆ ಇಲಾಖೆ, ಸೋಮವಾರಪೇಟೆ