ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆಗ್ರಹ,  ಹುಬ್ಬಳ್ಳಿ ವ್ಯಾಪಾರಸ್ಥರಿಂದ ಪ್ರತಿಭಟನೆ

IMG-20250429-WA0016.jpg
Published on

ಹುಬ್ಬಳ್ಳಿ: ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ಹಿಂದೂಗಳ ನರಮೇಧ ಖಂಡಿಸಿ ಇಲ್ಲಿಯ ಎಪಿಎಂಸಿ ವ್ಯಾಪಾರಸ್ಥರ ಸಂಘ ಮತ್ತು ಆಹಾರಧಾನ್ಯ ವರ್ತಕರ ಸಂಘಗಳ ವತಿಯಿಂದ ಮಂಗಳವಾರ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಾಯಿತು.

ಶಾಸಕ ಮಹೇಶ ಟೆಂಗಿನಕಾಯಿ, ಕೆಎಲ್ಇ ನಿರ್ದೇಶಕ ಶಂಕರಣ್ಣ ಮುನವಳ್ಳಿ ಅವರ ನೇತೃತ್ವದಲ್ಲಿ ಕಪ್ಪು ಪಟ್ಟಿ ಕಟ್ಟಿಕೊಂಡು ಎಪಿಎಂಸಿ ಮುಖ್ಯ ದ್ವಾರದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ವರ್ತಕರು ಉಗ್ರ ಚಟುವಟಿಕೆಯನ್ನು ಖಂಡಿಸಿದರು.

ಸಂಘದ ಅಧ್ಯಕ್ಷ ರಾಜಕಿರಣ ಮೆಣಸಿನಕಾಯಿ, ಗೌರವ ಕಾರ್ಯದರ್ಶಿ ಅಶೋಕ ಬಾಳಿಕಾಯಿ, ಆಹಾರ ಧಾನ್ಯ ವರ್ತಕರ ಸಂಘದ ಅಧ್ಯಕ್ಷ ಚನ್ನು ಹೊಸಮನಿ, ಸದಸ್ಯರು ಮಾತನಾಡಿ, ಪ್ರವಾಸಿಗರ ಮೇಲೆ ಪೈಶಾಚಿಕ ಕೃತ್ಯವೆಸಗಿದ ಉಗ್ರರಿಗೆ ಸರ್ಕಾರವು ಅತ್ಯಂತ ಕಠಿಣ ಶಿಕ್ಷೆಯನ್ನು ವಿಧಿಸಿ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಬೇಕೆಂದು ಆಗ್ರಹಿಸಿದರು. ದಾಳಿಯಲ್ಲಿ ಮಡಿದವರ ಆತ್ಮಕ್ಕೆ ಶಾಂತಿ ಕೋರಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಮುಂಬರುವ ದಿನಗಳಲ್ಲಿ ಜಮ್ಮು-ಕಾಶ್ಮೀರದ ಪ್ರವಾಸಿಗರ ರಕ್ಷಣೆಗೆ ಅಗತ್ಯಕ್ರಮ ಕೈಗೊಳ್ಳಬೇಕೆಂದು ಸರ್ಕಾರಕ್ಕೆ ವಿನಂತಿಸಿದರು. ಎಪಿಎಂಸಿ ಕಾರ್ಯದರ್ಶಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಹಿರಿಯರಾದ ಜಿ.ಎಂ. ಚಿಕ್ಕಮಠ, ಸಂಘದ ಉಪಾಧ್ಯಕ್ಷ ಅನೀಲ ಓಸ್ತವಾಲ, ಮಾಜಿ ಅಧ್ಯಕ್ಷ ಮುತ್ತು ಪಾಟೀಲ, ಶಿವಯೋಗಿ ಹೊಸಕಟ್ಟಿ, ಮಲ್ಲಿಕಾರ್ಜುನ ಬೋರಟ್ಟಿ, ಸುರೇಶ ಜೈನ್, ಶಿವನಗೌಡ ಪಾಟೀಲ, ರುದ್ರಪ್ಪ ಬೆಟಗೇರಿ, ಸುರೇಶ ಹುಣಸಿಕಟ್ಟಿ, ಗುಂಡಪ್ಪ ಸಾವುಕಾರ, ಈಶ್ವರಪ್ಪ ಹೆಬಸೂರ, ಸಿದ್ದಲಿಂಗೇಶ ಕೊಟ್ಟೂರಶೆಟ್ಟರ್, ಶಂಭು ಅಂಗಡಿ, ಅಶೋಕ ಓಸ್ತವಾಲ, ವೀರಣ್ಣ ವಾಲಿ, ಭರಮಗೌಡ ಪಾಟೀಲ, ಚಂದ್ರು ಪೂಜಾರ, ಪ್ರಭು ಅಂಕಲಕೋಟಿ, ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net