ಮುತ್ತಪ್ಪ ದೇವಾಲಯದಲ್ಲಿ ತೆರೆ ಮಹೋತ್ಸವ ಅಂತ್ಯ

15 vpt 1
ಶ್ರೀ ಮುತ್ತಪ್ಪ ದೇವಾಲಯದಲ್ಲಿ ಶಾಸ್ತಪ್ಪನ್ ತೆರೆ ದೈವ ನರ್ತನ ಗಮನ ಸೆಳೆಯಿತು.
Published on

ವಿರಾಜಪೇಟೆ: ಕುಕ್ಲೂರು ಗ್ರಾಮದ ಶ್ರೀ ಮುತ್ತಪ್ಪ ದೇವಾಲಯದಲ್ಲಿ ಗುರುವಾರ ಬಸುರೀಮಾಲ ತೆರೆ ಮೂಲಕ ವಾರ್ಷಿಕ ತೆರೆ ಮಹೋತ್ಸವಕ್ಕೆ ಅಂತ್ಯವಾಯಿತು.

ಮುತ್ತಪ್ಪನ್ ವೆಳ್ಳಾಟಂ, ಶ್ರೀ ಶಾಸ್ತಪ್ಪ ವೆಳ್ಳಾಟಂ, ಗುಳಿಗ ವೆಳ್ಳಾಟಂ ನಡೆಯಿತು. ಪ್ರಮುಖ ಆಕರ್ಷಣೆಯಾದ ಬಸುರಿಮಾಲ ವೆಳ್ಳಾಟಂ ಚಿಕ್ಕಪೇಟೆ ಮೈಕ್ರೋ ಸ್ಟೇಷನ್‌ನಿಂದ ಭಕ್ತರಿಗೆ ಅನುಗ್ರಹ ನೀಡಿದ ಬಳಿಕ ದೇವಾಲಯಕ್ಕೆ ಆಗಮಿಸಿತ್ತು. ನಂತರ ಕರಿಂಗುಟ್ಟಿ ಶಾಸ್ತಪ್ಪನ್ ವೆಳ್ಳಾಟಂ, ನಡೆಯಿತು.

ಗುಳಿಗನ ತೆರೆ, ಮುತ್ತಪ್ಪನ್ ಮತ್ತು ತಿರುವಪ್ಪನ್ ತೆರೆ ವಿಜೃಂಭಣೆಯಿಂದ ನಡೆಯಿತು. ಗುರುವಾರ ಮುಂಜಾನೆ 8 ಗಂಟೆಗೆ ಶಾಸ್ತಪ್ಪನ್ ತೆರೆ ವಿಶೇಷ, ಕರಿಂಗುಟ್ಟಿ ಶಾಸ್ತಪ್ಪನ್ ತೆರೆ ವೆಳ್ಳಾಟಂ ನಡೆಯಿತು. ಮಧ್ಯಾಹ್ನ 12 ವೇಳೆಗೆ ಬಸುರಿಮಾಲ ತೆರೆ ಹಲವು ಬಗೆಯ ದೈವನರ್ತನವನ್ನು ಪ್ರದರ್ಶನ ಮಾಡಿದ್ದು ವಿಶೇಷವಾಗಿತ್ತು. ಇದು ಭಕ್ತರ ಮನದಲ್ಲಿ ನೆಲೆಯೂರುವಂತೆ ಮಾಡಿತು. ದೇಗುಲದ ಆಡಳಿತ ಮಂಡಳಿ ವತಿಯಿಂದ ಆಗಮಿಕ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ವಾರ್ಷಿಕ ತೆರೆ ಮಹೋತ್ಸವದಲ್ಲಿ ದೇಗುಲದ ಆಡಳಿತ ಮಂಡಳಿಯ ಪದಾಧಿಕಾರಿಗಳು, ಸದಸ್ಯರು, ಕುಕ್ಲೂರು ಗ್ರಾಮಸ್ಥರು, ನಗರ ಸೇರಿದಂತೆ ವಿವಿಧ ಗ್ರಾಮಗಳ ಭಕ್ತರು ಆಗಮಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net