ಅಜಾತ ಶತ್ರುವಿನ ರೈತಪರ ಕಾಳಜಿ ಅಮೂಲ್ಯ

TDL 26-2
Published on

ತೇರದಾಳ: ಅಜಾತ ಶತ್ರು ಎಂದು ಹೆಸರುವಾಸಿಯಾದ ಅಟಲ್‌ಜೀ ಅವರ ರೈತ ಕಾಳಜಿ ಅಮೂಲ್ಯವಾದುದು. ಅದನ್ನು ನಮ್ಮ ಪ್ರಧಾನಿ ಮೋದಿ ಅವರು ಸಾಕಾರಗೊಳಿಸಲು ರೈತರಿಗಾಗಿ ವಿಶೇಷ ಕಾಳಜಿ ವಹಿಸಿದ್ದಾರೆ ಎಂದು ಶಾಸಕ ಸಿದ್ದು ಸವದಿ ಹೇಳಿದರು.

ಪಟ್ಟಣದ ಎಪಿಎಂಸಿ ಆವರಣದಲ್ಲಿ ಶುಕ್ರವಾರ ಅಟಲ್‌ಜೀ ಜನ್ಮದಿನ ನಿಮಿತ್ತ ಹಮ್ಮಿಕೊಂಡಿದ್ದ ಸರಳ ಕಾರ್ಯಕ್ರಮದಲ್ಲಿ ಅಟಲ್ ಜೀ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ದೇಶದುದ್ದಕ್ಕೂ ಉತ್ತಮ ದರ್ಜೆಯ ಹೆದ್ದಾರಿಗಳನ್ನು ನಿರ್ಮಿಸುವುದರ ಮೂಲಕ ಪ್ರತಿಯೊಬ್ಬರಲ್ಲಿಯೂ ಅಭಿವೃದ್ಧಿಯ ಕನಸನ್ನು ಸಾಕಾರಗೊಳಿಸಿದ ಧೀಮಂತ ವ್ಯಕ್ತಿ ಅವರಾಗಿದ್ದರು ಎಂದರು.

ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸುನಂದಾ ಆಸಂಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಜೆಪಿ ಗ್ರಾಮೀಣ ಘಟಕ ಅಧ್ಯಕ್ಷ ಸುರೇಶ ಅಕ್ಕಿವಾಟ, ಯುವ ಮೋರ್ಚಾ ಅಧ್ಯಕ್ಷ ಲಕ್ಕಪ್ಪ ಪಾಟೀಲ, ಆನಂದ ಕಂಪುನವರ, ವಿನಾಯಕ ಬಂಕಾಪುರ, ಕಾಶಿನಾಥ ರಾಠೋಡ, ಮಹಾವೀರ ಕೊಕಟನೂರ, ರವಿ ಜವಳಗಿ, ಸಂತೋಷ ಜಮಖಂಡಿ, ಸದಾಶಿವ ಹೊಸಮನಿ, ಕೇದಾರಿ ಪಾಟೀಲ, ಈರಣ್ಣ ತೇಲಿ, ವರ್ಧಮಾನ ಕಡಹಟ್ಟಿ, ರಾಜು ಬೆಳವಣಕಿ ಹಾಗೂ ತೇರದಾಳ ಮತಕ್ಷೇತ್ರದ ಬಿಜೆಪಿ ಮುಖಂಡರು, ಕಾರ್ಯಕರ್ತರು ಇದ್ದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net