

ತೇರದಾಳ: ಪಟ್ಟಣದ ಮಾರುಕಟ್ಟೆ, ಬಸ್ ನಿಲ್ದಾಣ ಸೇರಿ ವಿವಿಧ ಸ್ಥಳಗಳಲ್ಲಿ ಠಾಣಾಧಿಕಾರಿ ವಿಜಯ ಕಾಂಬಳೆ ಭೇಟಿ ನೀಡಿ ವ್ಯಾಪಾರಸ್ಥರು, ಅಟೋ ಚಾಲಕರು ಹಾಗೂ ಸಾರ್ವಜನಿಕರಿಗೆ ಕೋವಿಡ್-19 ನಿಯಮಗಳ ಕುರಿತು ಜಾಗೃತಿ ಮೂಡಿಸಿದರು.
ನಂತರ ಮಾತನಾಡಿ, ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಸುವುದು ಹಾಗೂ ಪರಸ್ಪರ ಅಂತರ ಕಾಯ್ದುಕೊಳ್ಳಬೇಕು. ನಿಯಮ ಉಲ್ಲಂಘನೆ ಮಾಡಿ ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ವ್ಯಾಪಾರಸ್ಥರಿಗೆ ಈ ಎಲ್ಲ ನಿಯಮಗಳ ಕುರಿತು ಕರಪತ್ರ ವಿತರಿಸಲಾಯಿತು.
ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರು ಅಡ್ಡಾದಿಡ್ಡಿಯಾಗಿ ನಿಲ್ಲಿಸಿದ ತಳ್ಳುಗಾಡಿ ಹಾಗೂ ಇತರ ಗಾಡಿಗಳನ್ನು ಬಯಲು ಜಾಗಗಳಿಗೆ ಕಳುಹಿಸುವ ಕಾರ್ಯವನ್ನು ಪಿಎಸ್‌ಐ ನೇತೃತ್ವದ ತಂಡ ಮಾಡಿತು. ಪೊಲೀಸ್ ಸಿಬ್ಬಂದಿ ಎಸ್.ಎನ್. ಸನಹಟ್ಟಿ, ರಾಜು ಪೂಜಾರಿ ಹಾಗೂ ವ್ಯಾಪಾರಸ್ಥರು, ಸಾರ್ವಜನಿಕರು ಇದ್ದರು.
EndFragment