ರೋಜರಿ ಮಾತೆ ಇಗರ್ಜಿಯ ತೆರಾಲಿ ಜಾತ್ರೆ

igarji
Published on

ಕುಂದಾಪುರ : ಕುಂದಾಪುರ ರೊಜಾರಿ ಮಾತೆ ಇಗರ್ಜಿಯ ತೆರಾಲಿ ಜಾತ್ರೆ ಮಂಗಳವಾರ ನಡೆಯಿತು. ದೇವರ ವಾಕ್ಯದ ಪೂಜಾ ವಿಧಿಯಿಂದ ಆರಂಭಗೊಂಡಿತು. ಸಂಜೆ ರೋಜರಿ ಮಾತೆಯ ಪಲ್ಲಕ್ಕಿಯ ಮೆರವಣಿಗೆ ನಡೆಯಿತು.

ಪೂಜಾ ವಿಧಿಯನ್ನು ಬಸ್ರೂರು ಇಗರ್ಜಿಯ ಸಹಾಯಕ ಧರ್ಮಗುರು ವಿಲ್ಸನ್ ಸಲ್ದಾನ್ಹ ನಡೆಸಿಕೊಟ್ಟರು. ಕುಂದಾಪುರ ಇಗರ್ಜಿಯ ಧರ್ಮಗುರುಗಳಾದ ಪೌಲ್ ರೇಗೊ, ಹಿಂದಿನ ಧರ್ಮಗುರು ಸ್ಟಾೃನಿ ತಾವ್ರೊ, ಸಹಾಯಕ ಧರ್ಮಗುರು ಅಶ್ವಿನ್ ಆರಾನ್ನಾ ಮತ್ತು ಸಂತ ಜುಜೆ ವಾಜ್ ಅವರಿಗೆ ಸಮರ್ಪಿಲ್ಪಟ್ಟ ಕುಂದಾಪುರ ವಲಯದ ಎಲ್ಲ ಇಗರ್ಜಿಗಳ ಧರ್ಮಗುರುಗಳು, ಕಟ್ಕೆರೆ ಬಾಲ ಯೇಸು ಆಶ್ರಮದ ಧರ್ಮಗುರುಗಳು, ಡಾನ್ ಬಾಸ್ಕೊ ಸಂಸ್ಥೆಯ ಧರ್ಮಗುರುಗಳು, ಕೆರೆಕಟ್ಟೆ ಪುಣ್ಯಕ್ಷೇತ್ರದ ರೆಕ್ಟರ್ ಹಾಗೂ ಅತಿಥಿ ಧರ್ಮಗುರುಗಳು ಪೂಜಾ ವಿಧಿಯಲ್ಲಿ ಪಾಲ್ಗೊಂಡರು. ಈ ಧಾರ್ಮಿಕ ಕಾರ್ಯಕ್ರಮದ ಪೋಷಕರಾದ ಜೂಲಿಯೆಟ್ ಪಾಯ್ಸ, ಲವೀನಾ ಡಿಆಲ್ಮೇಡಾ, ಶರ್ಮಿಳಾ ಸುವಾರಿಸ್ ಉಪಸ್ಥಿತರಿದ್ದರು.

ಇಗರ್ಜಿ ಪಾಲನ ಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ, ಧರ್ಮಭಗಿನಿಯರು, ಪಾಲನ ಮಂಡಳಿ ಸದಸ್ಯರು, ಗುರಿಕಾರರು, ಚರ್ಚಿನ ಸದಸ್ಯರು ಹಾಗೂ ಜಾತಿ ಧರ್ಮ ಭೇದ ಭಾವ ಮರೆತು ಜನರು ಆಗಮಿಸಿ ಭಾವೈಕ್ಯತೆ ಮೆರೆದರು. ಇಗರ್ಜಿ ಮುಂಭಾಗದಲ್ಲಿ ಪ್ರದರ್ಶಿಸಲ್ಪಟ್ಟ ಲೇಸರ್ ಲೈಟಿಂಗ್ ಶೋ ಜನಕಾರ್ಷಣೆಗೆ ಒಳಗಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net