

ತೇರದಾಳ: ನಗರದ ವೇದಮಾತೆ ಗಾಯತ್ರಿ ದೇವಸ್ಥಾನದಲ್ಲಿ ಬುಧವಾರ ವಿಶ್ವಕರ್ಮ ವಿಕಾಸ ಸಂಸ್ಥೆಯವರಿಂದ ಪುರಸಭೆಗೆ ನೂತನ ಅಧ್ಯಕ್ಷೆ ಅನ್ನಪೂರ್ಣ ಸದಾಶಿವ ಹೊಸಮನಿ ಹಾಗೂ ಉಪಾಧ್ಯಕ್ಷೆ ಶಾಂತವ್ವ ರುದ್ರಪ್ಪ ಕಾಲತಿಪ್ಪಿ ಅವರನ್ನು ಸನ್ಮಾನಿಸಲಾಯಿತು.
ಮುಖಂಡ ಸದಾಶಿವ ಹೊಸಮನಿ ಮಾತನಾಡಿ, ವಿಶ್ವಕರ್ಮ ಸೇರಿದಂತೆ ಇನ್ನಿತರ ಸಮಾಜದ ಏಳಿಗೆಗೆ ಶ್ರಮಿಸಲು ಬಿಜೆಪಿ ಪಕ್ಷ ಸಿದ್ಧವಿದೆ ಎಂದು ಹೇಳಿದರು.
ತಾಲೂಕಿನ ಭೂನ್ಯಾಯ ಮಂಡಳಿ ನಾಮನಿರ್ದೇಶಿತ ಸದಸ್ಯ, ಬಿಜೆಪಿ ಮುಖಂಡ ಪ್ರಭಾಕರ ಶಂಭು ಬಾಗಿ, ಮುಖಂಡರಾದ ರಾಮಣ್ಣ ಹಿಡಕಲ್, ಸದಾಶಿವ ಹೊಸಮನಿ, ಸಂಗಮೇಶ ಕಾಲತಿಪ್ಪಿ ಅವರನ್ನು ಸಹ ಸಮಾಜದವರು ಸನ್ಮಾನಿಸಿದರು.
ವಿಶ್ವಕರ್ಮ ಸಮಾಜದ ಅಧ್ಯಕ್ಷ ಬಸವರಾಜ ಪೋತದಾರ ಅಧ್ಯಕ್ಷತೆ ವಹಿಸಿದ್ದರು. ಅರ್ಚಕ ರಾಚಪ್ಪಾಚಾರ್ಯ ಬಡಿಗೇರ, ನಾರಾಯಣ ಪತ್ತಾರ, ಕಲ್ಲಪ್ಪ ಬಡಿಗೇರ, ಸದಾಶಿವ ಸುತಾರ, ಸಂತೋಷ ಬಡಿಗೇರ, ಸಂಜು ಕಲೆಗಾರ, ಪಿ.ಎಂ. ಪತ್ತಾರ, ಐ.ಆರ್. ಬಡಿಗೇರ, ಮಲ್ಲು ಪತ್ತಾರ, ಮುತ್ತು ಸೋನಾರ, ವೈಶಾಲಿ ಪೋತದಾರ, ಮಾಲಾ ಬಡಿಗೇರ, ಕೆ.ಬಿ. ಪತ್ತಾರ, ಶಶಿಕಲಾ ಪತ್ತಾರ, ಭಾರತಿ ಬಡಿಗೇರ, ನಾಗರಾಜ ಬಡಿಗೇರ, ವಿವೇಕ ಪತ್ತಾರ ಸೇರಿ ಸಮಾಜದ ವಿವಿಧ ಘಟಕಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ರಮೇಶ ಪೋತದಾರ, ಎಸ್.ವಿ. ಗೋಠೆಕರ ಕಾರ್ಯಕ್ರಮ ನಿರ್ವಹಿಸಿದರು. ಇದಕ್ಕೂ ಮುಂಚೆ ಪಂಚಮುಖಿ ಗಾಯತ್ರಿ ದೇವಿಗೆ ವಿಶೇಷ ಪೂಜಾಭಿಷೇಕ, ಅಲಂಕಾರಿಕ ಪೂಜೆ ಮಾಡಲಾಗಿತ್ತು.