ಕೆಲವು ಶಾಸಕ ಪ್ರಚಾರ ಪಡೆದರು: ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪ

tdl-18-1a
ತೇರದಾಳ ಪಟ್ಟಣದ ಅಲ್ಲಮಪ್ರಭು ಸಭಾಭವನದಲ್ಲಿ ಶರಣು ಶರಣಾರ್ಥಿ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಬಸವಜಯ ಮೃತ್ಯುಂಜಯ ಶ್ರೀಗಳು, ವಿಜಯಾನಂದ ಕಾಶಪ್ಪನವರ, ವಿದ್ಯಾಧರ ಸವದಿ ಅನೇಕ ಮುಖಂಡರು ಇದ್ದರು.
Published on

ತೇರದಾಳ: ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ನೀಡಲು ಸರ್ಕಾರ ಆರು ತಿಂಗಳ ಕಾಲಾವಕಾಶ ಪಡೆದಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಪಟ್ಟಣದ ಅಲ್ಲಮಪ್ರಭು ಸಮುದಾಯ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶರಣು ಶರಣಾರ್ಥಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸರ್ಕಾರ ಗಡುವು ನೀಡಿದ ತಕ್ಷಣವೇ ಹೋರಾಟದಲ್ಲಿ ಭಾಗವಹಿಸದ ಹತ್ತು-ಹನ್ನೆರಡು ಶಾಸಕರು ಬಂದು ಸ್ವಾಮೀಜಿ ಹೋರಾಟಕ್ಕೆ ಭರವಸೆ ಸಿಕ್ಕಿದೆ ಮಠಕ್ಕೆ ಹೋಗೋಣ ನಡ್ರಿ ಎಂದು ಮಾಧ್ಯಮಗಳಲ್ಲಿ ಪ್ರಚಾರ ತಗೊಂಡರು. ಶಾಸಕ ಸಿದ್ದು ಸವದಿ ಸೇರಿ ನಾಲ್ಕು ಜನರು ಮಾತ್ರ ಹೋರಾಟಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ಹೇಳಿದರು.

ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿದರು. ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಶ್ರೀಗಳು ಸಸಿಗೆ ನೀರುಣಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಿಜೆಪಿ ಯುವ ಮೋರ್ಚಾ ಘಟಕದ ಜಿಲ್ಲಾ ಕಾರ್ಯದರ್ಶಿ ವಿದ್ಯಾಧರ ಸವದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗರಾಳದ ಡಾ.ಬಿ.ಎಸ್. ಪಾಟೀಲ, ತಾಲೂಕು ಅಧ್ಯಕ್ಷ ಶ್ರೀಶೈಲ ದಲಾಲ, ಎಂ.ಎಸ್. ರುದ್ರಗೌಡ, ಪರಪ್ಪ ಕಾಲತಿಪ್ಪಿ, ಅಮರೇಶ ನಾಗೂರ, ಸುಭಾಸ ಕೊಪ್ಪದ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net