ಜಿಟಿ ಜಿಟಿ ಮಳೆಯಿಂದ ಮಲೆನಾಡಿನಂತಾದ ತೇರದಾಳ

Teradala is hilly due to GTGT rain
ತೇರದಾಳ ಪಟ್ಟಣದಲ್ಲಿ ಮಂಗಳವಾರ ಮಳೆ ಸುರಿಯುತ್ತಿರುವುದು.
Published on

ತೇರದಾಳ : ಮೂರು ದಿನಗಳಿಂದ ಸುರಿಯುತ್ತಿರುವ ಜಿಟಿ ಜಿಟಿ ಮಳೆಯಿಂದಾಗಿ ಮತ ಕ್ಷೇತ್ರವು ಮಲೆನಾಡಿನಂತಾಗಿದೆ. ಶಾಲಾ, ಕಾಲೇಜು, ಕಚೇರಿ, ಕೆಲಸಕ್ಕೆ ತೆರಳುವ ಸಾರ್ವಜನಿಕರು ಮಳೆಯಲ್ಲೇ ಸಂಚರಿಸುತ್ತಿರುವುದು ಸಾಮಾನ್ಯವಾಗಿದೆ.

ಮಹಾರಾಷ್ಟ್ರ ಸೇರಿ ಕೊಯ್ನ ಜಲಾಶಯ ಭಾಗದಲ್ಲಿ ಮಳೆ ಮುಂದುವರಿದಿದ್ದು, ಕೃಷ್ಣೆಗೆ ಅಪಾರ ನೀರು ಹರಿದು ಬಂದು ಮೈದುಂಬಿ ಹರಿಯುತ್ತಿದೆ. ದಿನದಿಂದ ದಿನಕ್ಕೆ ನೀರಿನ ಹರಿವು ಹೆಚ್ಚಾಗುತ್ತಿದೆ.

ಮಂಗಳವಾರ ಹಿಪ್ಪರಗಿ ಜಲಾಶಯದಲ್ಲಿ 1,21,993 ಕ್ಯೂಸೆಕ್ ಒಳಹರಿವು, 1,21,243 ಕ್ಯೂಸೆಕ್ ಹೊರ ಹರಿವು ಇದೆ. ಜಲಾಶಯದ ಎಲ್ಲ ಗೇಟ್‌ಗಳನ್ನು ತೆರೆಯಲಾಗಿದ್ದು, ಜಿರೋ ಸ್ಟೋರೇಜ್ ಒಳಗೊಂಡಿದೆ ಎಂದು ಜಲಾಶಯದ ಹಿರಿಯ ಅಧಿಕಾರಿ ಶಿವಮೂರ್ತಿ ತಿಳಿಸಿದ್ದಾರೆ.

ಒಂದೇ ದಿನದಲ್ಲಿ ಅಂದಾಜು 16,000 ಕ್ಯೂಸೆಕ್ ನೀರಿನ ಹರಿವು ಹೆಚ್ಚಾಗಿದೆ. ಕೊಯ್ನ 163 ಮಿ.ಮೀ., ನವಜಾ 145 ಮಿ.ಮೀ., ಮಹಾಬಳೇಶ್ವರ 140 ಮಿ.ಮೀ., ವಾರನಾ 110 ಮಿ.ಮೀ., ದೂಧಗಂಗಾ 137 ಮಿ.ಮೀ. ನಷ್ಟು ಮಂಗಳವಾರ ಮಳೆಯ ಪ್ರಮಾಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net