ಎಲ್ಲ ಕ್ಷೇತ್ರಗಳಲ್ಲೂ ಮಹಿಳೆ ಛಾಪು

tdl-6-2a
Published on

ತೇರದಾಳ: ತಂತ್ರಜ್ಞಾನ ಬೆಳೆದಂತೆ ಮಹಿಳೆ ಕೂಡ ಪ್ರತಿಯೊಂದು ಕ್ಷೇತ್ರದಲ್ಲಿ ತನ್ನದೆಯಾದ ಸಾಧನೆ ಮಾಡುವ ಮೂಲಕ ತಾನು ಸಬಲೆ ಎಂಬುದನ್ನು ಸಾಬೀತು ಪಡಿಸಿದ್ದಾಳೆ ಎಂದು ಡಿಎಸ್‌ಎಸ್ ಮುಖ್ಯಸ್ಥೆ, ನ್ಯಾಯವಾದಿ ಅಂಬಿಕಾ ತೆಳಗಡೆ ಹೇಳಿದರು.

ಇಲ್ಲಿನ ದೇವರಾಜ ಪಟ್ಟಣದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಸಾವಿತ್ರಿಬಾಯಿ ಫುಲೆ ಜನ್ಮ ದಿನ ಕಾಯರ್ರ್ಕ್ರಮ ನಿಮಿತ್ತ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಿಸಿ ಅವರು ಮಾತನಾಡಿದರು.

ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ವಿದ್ಯಾಧರ ಧರೆನ್ನವರ, ಕರವೇ ಕಾರ್ಯಕರ್ತ ರಾಜು ನದಾಫ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net