

ತೇರದಾಳ: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ತಯಾರಿಸಲಾದ ಗಣಿತ ಮಾದರಿ ಪ್ರಶ್ನೆಪತ್ರಿಕೆಗಳ ಪುಸ್ತಕಗಳು ಬಹಳಷ್ಟು ಉಪಯುಕ್ತವಾಗಿದ್ದು, ಸದುಪಯೋಗ ಮಾಡಿಕೊಳ್ಳಬೇಕು ಎಂದು ಸಂಸ್ಥೆ ಕಾರ್ಯಾಧ್ಯಕ್ಷ ಡಿ.ಆರ್. ಪಾಟೀಲ ಹೇಳಿದರು.
ಪಟ್ಟಣದ ಎಸ್.ಜೆ. ಹೆಣ್ಣುಮಕ್ಕಳ ಪ್ರೌಢಶಾಲೆಯಲ್ಲಿ ಬುಧವಾರ ಗಣಿತ ಶಿಕ್ಷಕ ನೇಮಿನಾಥ ಜಮಖಂಡಿ ಅವರು ತಯಾರಿಸಿದ ಗಣಿತ ಮಾದರಿ ಪ್ರಶ್ನೆಪತ್ರಿಕೆಗಳ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಸಂಸ್ಥೆ ಖಜಾಂಚಿ ನಿಲೇಶ ದೇಸಾಯಿ, ಶಿಕ್ಷಕ ನೇಮಿನಾಥ ಜಮಖಂಡಿ ಮಾತನಾಡಿದರು. ಸರಳವಾಗಿ ಜರುಗಿದ ಸಮಾರಂಭದಲ್ಲಿ ಡಾ.ಜೆ.ಬಿ. ಆಲಗೂರ, ಎಸ್.ಎ. ಕಾಗಿ, ಮುಖ್ಯಗುರುಮಾತೆ ಎಸ್.ಎನ್. ಹೆಬ್ಬಾಳೆ ಹಾಗೂ ಶಾ ಸಿಬ್ಬಂದಿ ಇದ್ದರು.
EndFragment