ಪಿಯು ಪ್ರಥಮ ಫಲಿತಾಂಶ ಪ್ರಕಟ

TDL NEWS 6-1
Published on

ತೇರದಾಳ: ಲಾಕ್‌ಡೌನ್ ನಡುವೆ ಪರೀಕ್ಷೆ ಫಲಿತಾಂಶಕ್ಕಾಗಿ ಚಾತಕ ಪಕ್ಷಿಯಂತೆ ಕಾದು ಕುಳಿತ್ತಿದ್ದ ಪ್ರಥಮ ಪಿಯು ವಿದ್ಯಾರ್ಥಿಗಳ ಫಲಿತಾಂಶ ಕೊನೆಗೂ ಪ್ರಕಟವಾಗಿದೆ. ಪದವಿ ಪೂರ್ವ ಶಿಕ್ಷಣ ಇಲಾಖೆ ಮೇ 5ರಂದು ಲಿತಾಂಶ ಪ್ರಕಟಿಸುವಂತೆ ಸೂಚಿಸಿದ ಬೆನ್ನಲ್ಲೇ ಸ್ಥಳೀಯ ಎಸ್‌ಡಿಎಂ ಸಂಸ್ಥೆಯ ವಾಣಿಜ್ಯ ವಿಭಾಗದಲ್ಲಿ ಇಲಾಖೆಯ ನಿಯಮಗಳನ್ವಯ ಉಪನ್ಯಾಸಕರು ಮೊಬೈಲ್, ವಾಟ್ಸ್‌ಆ್ಯಪ್‌ಗಳ ಮೂಲಕ ಫಲಿತಾಂಶ ಪ್ರಕಟಿಸಿದ್ದಾರೆ.

ಫಲಿತಾಂಶ ಪ್ರಕ್ರಿಯೆಯಲ್ಲಿ ಇದು ವಿನೂತನವಾದರೂ ವಿದ್ಯಾರ್ಥಿಗಳ ಆಸೆಯಂತೆ ಫಲಿತಾಂಶ ಸಿಕ್ಕಿರುವುದು ಖುಷಿ ವಿಚಾರವಾಗಿದೆ ಎಂದು ಸಂಸ್ಥೆ ಪಿಯು ವಾಣಿಜ್ಯ ವಿಭಾಗದ ಪ್ರಾಚಾರ್ಯ ಎಸ್.ಬಿ. ಗೊಬ್ಬೂರ ಸಂತಸ ವ್ಯಕ್ತಪಡಿಸಿದರು.

2019-20ನೇ ಸಾಲಿಗಾಗಿ ಸಂಸ್ಥೆಯ ಪ್ರಥಮ ವರ್ಷದಲ್ಲಿ 51 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 46 ವಿದ್ಯಾರ್ಥಿಗಳು ಪಾಸಾಗುವುದರ ಮೂಲಕ ಶೇ. 90.19 ರಷ್ಟು ಲಿತಾಂಶ ಪ್ರಕಟವಾಗಿದೆ. ಉಪನ್ಯಾಸಕ ಎಸ್.ಜಿ. ಕೆಂದೂಳಿ, ಜಿ.ಐ. ಕುಂಬಾರ, ಎಂ.ಎಸ್. ಹೂಗಾರ ಇದ್ದರು. ಸಮೀಪದ ಸಸಾಲಟ್ಟಿ ಗ್ರಾಮದ ಜ್ಞಾನಯೋಗಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿಯೂ ಮೊಬೈಲ್ ಮೂಲಕ ಫಲಿತಾಂಶವನ್ನು ಪ್ರಕಟಿಸಲಾಗಿದೆ ಎಂದು ಪ್ರಾಚಾರ್ಯ ಬಸವರಾಜ ಹುದ್ದಾರ ತಿಳಿಸಿದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net