

ತೇರದಾಳ: ನಾಡು ನುಡಿಗೆ ಮಾತ್ರವಲ್ಲದೆ ಈ ದೇಶ ಕಟ್ಟುವಲ್ಲಿ ಗ್ರಾಮೀಣರೇ ಮುಂದು ಎಂದು ಮತ್ತೊಮ್ಮೆ ಸಾಬೀತಾಗಿದೆ. ಆದ್ದರಿಂದ ಗ್ರಾಮಗಳಲ್ಲೆ ದೇಶದ ಭವಿಷ್ಯ ಅಡಗಿದೆ ಎಂದು ತೇರದಾಳ ಶಾಸಕ ಹಾಗೂ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಿದ್ದು ಸವದಿ ಹೇಳಿದರು.
ಸಮೀಪದ ಸಸಾಲಟ್ಟಿಯ 23 ವರ್ಷದ ಯುವಕ ವಿನೋದ ಕಾಪಸಿ ಭಾರತೀಯ ಸೇನೆಯ ಲೆಫ್ಟಿನೆಂಟ್ ಹುದ್ದೆಗೆ ನೇಮಕವಾಗಿದ್ದರ ನಿಮಿತ್ತ ಶನಿವಾರ ಸಂಜೆ ಅವರ ಮನೆಗೆ ಭೇಟಿ ನೀಡಿ, ವಿನೋದರನ್ನು ಸತ್ಕರಿಸಿ ಅವರು ಮಾತನಾಡಿದರು.
ದೇಶ ಸೇವೆ ಮಾಡುವ ಸೌಭಾಗ್ಯ ಎಲ್ಲರಿಗೂ ದೊರೆಯದು, ಅಂತಹ ಅವಕಾಶ ಇಷ್ಟು ದೊಡ್ಡ ಹುದ್ದೆಯೊಂದಿಗೆ ಅವರಿಗೆ ದೊರಕಿದ್ದು ಹಾಗೂ ಅದನ್ನು ಪಡೆಯಲು ಅವರ ಪರಿಶ್ರಮ ದೇಶಭಕ್ತಿಯ ಪ್ರತೀಕ ಎಂದು ಹೇಳಿದರು.
ವಿನೋದ ತಂದೆ ಪ್ರಕಾಶ, ತಾಯಿ ಅನಿತಾ, ಗ್ರಾಮಸ್ಥರಾದ ರಾಯಪ್ಪ ಮುರಾಬಟ್ಟಿ, ಪ್ರಭು ಮದಲಮಟ್ಟಿ, ಹುಲೆಪ್ಪ ಹುಕ್ಕೇರಿ, ಜಕ್ಕಪ್ಪ ಜಲಪುರ, ಪ್ರಕಾಶ ಮಾನಶೆಟ್ಟಿ, ಲಕ್ಕಪ್ಪ ಪಾಟೀಲ, ಮುತ್ತು ಭದ್ರಶೆಟ್ಟಿ, ರಾಜು ಉಳ್ಳಾಗಡ್ಡಿ, ಮುತ್ತಪ್ಪ ಕಾಪಶಿ, ರಾಜು ಬೆಳವಣಕಿ ಸೇರಿದಂತೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಇದ್ದರು.
EndFragment