

ತೇರದಾಳ: ಕರೊನಾ ಮಹಾಮಾರಿ ಸಂಚಲನ ಮೂಡಿಸಿದ್ದರಿಂದಾಗಿ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರಿ ಪ್ರಮಾಣದ ಇಳಿಕೆ ಕಂಡಿಬಂದಿದ್ದು, ಬಸ್ ನಿಲ್ದಾಣಗಳು ಪ್ರಯಾಣಿಕರಿಲ್ಲದೆ ಭಣಗುಡುತ್ತಿವೆ.
ಮೂಲಗಳ ಪ್ರಕಾರ ಸಾಮಾನ್ಯ ದಿನಗಳಿಗಿಂತ ಇದೀಗ ಅರ್ಧದಷ್ಟು ಪ್ರಯಾಣಿಕರು ಸಂಚರಿಸುತ್ತಿಲ್ಲ. ಹೀಗಾಗಿ ಸರ್ಕಾರಿ ವಾಹನಗಳು ಪ್ರಯಾಣಿಕರಿಲ್ಲದೆ ಖಾಲಿ ಖಾಲಿಯಾಗಿ ಸಂಚರಿಸುತ್ತಿವೆ. ಇದರಿಂದ ಸಾರಿಗೆ ಸಂಸ್ಥೆಯವರು ಅನೇಕ ಬಸ್‌ಗಳ ಸಂಚಾರವನ್ನು ಕಡಿತಗೊಳಿಸಿದ್ದಾರೆ. ಪಟ್ಟಣದಲ್ಲಿನ ಬಸ್ ನಿಲ್ದಾಣದಲ್ಲೂ ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು.
ಅಲ್ಲಲ್ಲಿ ಜಾತ್ರೆಗಳು ಇದ್ದರೂ ಜನರು ಪ್ರವಾಸವನ್ನು ಮುಂದಕ್ಕೆ ಹಾಕುತ್ತಿರುವುದರಿಂದ ಖಾಸಗಿ ವಾಹನಗಳು ಕೂಡ ಸಂಚರಿಸದೆ ಹಾಗೆಯೇ ನಿಂತಿವೆ.
ಒಟ್ಟಾರೆ ಕರೊನಾ ಕೇವಲ ಆರೋಗ್ಯ, ಶಿಕ್ಷಣ, ವ್ಯಾಪಾರ ಅಷ್ಟೆ ಅಲ್ಲದೆ, ಸಾರಿಗೆ ಮೇಲೂ ಭಾರಿ ಪ್ರಮಾಣದ ಹೊಡೆತ ಕೊಟ್ಟಿದೆ.
ಭಾನುವಾರ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿದ್ದಂತೆ ಜಮಖಂಡಿ ಡಿಪೋದಿಂದ ಹದಿನೆಂಟು ಬಸ್‌ಗಳನ್ನು ಸ್ಥಗಿತಗೊಳಿಸಲಾಗಿದೆ. ಕರೊನಾ ಮುನ್ನೆಚ್ಚರಿಕೆ ಕ್ರಮವಾಗಿ ಬಸ್‌ಗಳಿಗೆ ನಮ್ಮ ಸಿಬ್ಬಂದಿ ಮೂಲಕ ಸ್ಯಾನಿಟರಿ ಸ್ಪ್ರೇ ಮಾಡುತ್ತಿದ್ದೇವೆ.
-ಸಂಗಮೇಶ ಮಾಟೋಳ್ಳಿ, ಡಿಪೋ ಮ್ಯಾನೇಜರ್, ಜಮಖಂಡಿ
EndFragment