ಅಭಿವೃದ್ಧಿ ಕಾರ್ಯಗಳಿಗೆ ಸಹಕಾರ ನೀಡಿ

TDL NEWS 15-3
Published on

ತೇರದಾಳ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗೆ ವಿವಿಧ ಇಲಾಖೆಗಳಡಿ ಅಂದಾಜು 130 ಕೋಟಿ ರೂ. ಅನುದಾನವನ್ನು ಸರ್ಕಾರ ನೀಡಿದೆ ಎಂದು ಶಾಸಕ ಸಿದ್ದು ಸವದಿ ಹೇಳಿದರು.

ಪಟ್ಟಣದ ತಮದಡ್ಡಿ ನಾಕಾ ಬಳಿ ತೇರದಾಳ-ಹಳಿಂಗಳಿ ರಸ್ತೆಯ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆಯಡಿ ಮಂಜೂರಾದ 30 ಲಕ್ಷ ರೂ. ಅನುದಾನದ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಕ್ಷೇತ್ರದ ಗ್ರಾಮೀಣ ರಸ್ತೆ ಸೇರಿ ರೈತರ ಅನುಕೂಲಕ್ಕಾಗಿ ತೋಟದ ವಸತಿ ರಸ್ತೆಗಳ ಅಭಿವೃದ್ಧಿಗೂ ಹೆಚ್ಚಿನ ಆದ್ಯತೆ ನೀಡಲಾಗಿದೆ. ಜತೆಗೆ ನಗರ ವ್ಯಾಪ್ತಿಯ ಪ್ರಮುಖ ರಸ್ತೆಗಳ ಅಭಿವೃದ್ಧಿಗೂ ಆದ್ಯತೆ ನೀಡಲಾಗಿದೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರದಿಂದ ಅನುದಾನ ತರಲಾಗುವುದು. ಸಾರ್ವಜನಿಕರು ಅಭಿವೃದ್ಧಿ ಕಾರ್ಯಗಳಿಗೆ ಸಹಕಾರ ನೀಡಬೇಕೆಂದು ಹೇಳಿದರು.

ಇಲಾಖೆಯ ಎಇಇ ಜಯದೇವ ಹಿರೇಮಠ, ಎಇ ಎಸ್.ಎಂ. ಬಿರಾದಾರ, ಎಪಿಎಂಸಿ ತಾಲೂಕು ಅಧ್ಯಕ್ಷ ವರ್ಧಮಾನ ಕಡಹಟ್ಟಿ, ಹಿರಿಯರಾದ ಪ್ರಭಾಕರ ಬಾಗಿ, ಮಹಾವೀರ ಕೊಕಟನೂರ, ಸುರೇಶ ರೇನಕೆ, ಬಾಳು ದೇಶಪಾಂಡೆ, ರಾಮಣ್ಣ ಹಿಡಕಲ್, ಅಜೀತ ದೇಸಾಯಿ, ಜಿನಪ್ಪ ಸವದತ್ತಿ, ಶೀತಲ ಬೋಳಗೊಂಡ, ಪ್ರಕಾಶ ಕುಳ್ಳಿ, ಮುನ್ನಾ ತಹಸೀಲ್ದಾರ್ ಸೇರಿ ಮತ್ತಿತರರು ಇದ್ದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net