ಟ್ರಾೃಕ್ಟರ್ ಗಾಲಿಗೆ ಸಿಲುಕಿ ಬಾಲಕಿ ಸಾವು

tdl-8-1a
Published on

ತೇರದಾಳ: ಸಮೀಪದ ಗೋಲಭಾವಿ ಗ್ರಾಮದಿಂದ ಕಾಲತಿಪ್ಪಿಗೆ ತೆರಳುವ ರಸ್ತೆಯಲ್ಲಿ ಶುಕ್ರವಾರ ಕಬ್ಬು ತುಂಬಿದ ಟ್ರಾೃಕ್ಟರ್‌ನ 2ನೇ ಟ್ರೇಲರ್‌ಗೆ ನಾಲ್ಕು ವರ್ಷದ ಮಗು ಸಿಲುಕಿ ಸಾವಿಗೀಡಾಗಿದೆ. ಪ್ರತೀಕ್ಷಾ ಬಸಪ್ಪ ಯಬರಟ್ಟಿ (4) ಮೃತ ಮಗು.

ಸಸಾಲಟ್ಟಿಯಿಂದ ಕಾಲತಿಪ್ಪಿ-ಗೋಲಭಾವಿ ಮಾರ್ಗವಾಗಿ ನಿರಾಣಿ ಶುಗರ್ಸ್‌ಗೆ ಕಬ್ಬು ಸಾಗಿಸುವ ಟ್ರಾೃಕ್ಟರ್‌ಗೆ ಮಗು ಸಿಲುಕಿ ಮೃತಪಟ್ಟಿದೆ. ಹಿಡಕಲ್ ಮೂಲದ ಬಾಲಕಿ ಪ್ರತೀಕ್ಷಾ ಗೋಲಭಾವಿ ಗ್ರಾಮದ ತನ್ನ ಅಜ್ಜನ ತೋಟದ ಮನೆಯಲ್ಲಿಯೇ ಇದ್ದಳು. ಬನಹಟ್ಟಿ ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿನ ಶವದ ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ಘಟನಾ ಸ್ಥಳಕ್ಕೆ ಬನಹಟ್ಟಿ ಸಿಪಿಐ ಜೆ.ಕರುಣೇಶಗೌಡ, ತೇರದಾಳ ಠಾಣಾಧಿಕಾರಿ ವಿಜಯ ಕಾಂಬಳೆ ಭೇಟಿ ನೀಡಿ ಪರಿಶೀಲಿಸಿದರು. ತೇರದಾಳ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net