ಬಿಳಿಗಿರಿರಂಗನಬೆಟ್ಟದಲ್ಲಿ ತೆಪ್ಪೋತ್ಸವ ಸಂಭ್ರಮ

Oplus_131072
ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟದ ಸೋಮೇಶ್ವರ ಕೆರೆಯಲ್ಲಿ ಭಾನುವಾರ ಬಿಳಿಗಿರಿರಂಗನಾಥಸ್ವಾಮಿಯ ತೆಪ್ಪೋತ್ಸವ ನೆರವೇರಿತು.
Published on

ಯಳಂದೂರು: ತಾಲೂಕಿನ ಪೌರಾಣಿಕ ಯಾತ್ರಾಸ್ಥಳವಾಗಿರುವ ಬಿಳಿಗಿರಿರಂಗನಬೆಟ್ಟದಲ್ಲಿ ಒಂದು ವಾರಗಳ ಕಾಲ ನಡೆಯಲಿರುವ ತೆಪ್ಪೋತ್ಸವ ಮೇ 23 ರಿಂದ ಆರಂಭಗೊಂಡಿದ್ದು, ಇದರ ಭಾಗವಾಗಿ ಭಾನುವಾರವೂ ಹಲವು ಕಾರ್ಯಕ್ರಮಗಳು ನಡೆದವು.


ದೇಗುಲದಿಂದ ಐದಾರು ಕಿಲೋಮೀಟರ್ ದೂರದಲ್ಲಿರುವ ಸೋಮೇಶ್ವರನ ಕೆರೆಯಲ್ಲಿ ತೆಪ್ಪೋತ್ಸವ ನಡೆಯುವ ವಾಡಿಕೆ ಇದೆ. ಇದರ ನಿಮಿತ್ತ ಬಿದಿರನ್ನು ಬಳಸಿಕೊಂಡು ಈ ಕೆರೆಯಲ್ಲಿ ತೆಪ್ಪವನ್ನು ಮಾಡಲಾಗುತ್ತದೆ. ಈ ಜವಾಬ್ದಾರಿಯನ್ನು ಇಲ್ಲಿನ ಸೋಲಿಗ ಸಮುದಾಯವೇ ನೆರವೇರಿಸುವುದು ಇಲ್ಲಿನ ಸಂಪ್ರದಾಯ. ಗೋವಿಂದ ನಾಮಾವಳಿಯನ್ನು ಹಾಡಿಕೊಂಡು ನೂರಾರು ಭಕ್ತರು ಈ ಉತ್ಸವದಲ್ಲಿ ಭಾಗಿಯಾಗಿದ್ದರು.

ಬಿಳಿಗಿರಿರಂಗನಬೆಟ್ಟದಲ್ಲಿ ನಡೆಯುವ ದೊಡ್ಡ ಜಾತ್ರೆಯಾದ ಒಂದು ತಿಂಗಳ ನಂತರ ತೆಪ್ಪೋತ್ಸವ ನಡೆಸಲಾಗುತ್ತದೆ. ಒಟ್ಟು 6 ದಿನಗಳ ಕಾಲ ಪ್ರತಿದಿನ ಸಂಜೆ ಬೆಟ್ಟದ ಉತ್ಸವಮೂರ್ತಿಯನ್ನು ಮೆರವಣಿಗೆ ಮೂಲಕ ಹೊತ್ತು ತಂದು ಅಲಂಕೃತ ತೆಪ್ಪದಲ್ಲಿ ಕುಳ್ಳಿರಿಸಿ ಪೂಜೆ ಸಲ್ಲಿಸಿ ಇದನ್ನು ತೇಲಿಸಿ ಪೂಜಿಸುವ ಪೂಜಾವಿಧಿ ಇದಾಗಿದೆ. 7ನೇ ದಿನ ಇಲ್ಲಿರುವ ಮತ್ತೊಂದು ಪೌರಾಣಿಕ ದೇಗುಲವಾದ ಗಂಗಾಧರೇಶ್ವರಸ್ವಾಮಿಯ ತೆಪ್ಪ ನಡೆಯುತ್ತದೆ ಆ ದಿನ ಗಂಗಾಧರೇಶ್ವರಸ್ವಾಮಿಯ ಉತ್ಸವಮೂರ್ತಿಯನ್ನು ಕುಳ್ಳಿರಿಸಿ ತೆಪ್ಪೋತ್ಸವ ನಡೆಸಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net