ಬೀಚಿ ಬಳಗದ ದಶಮಾನೋತ್ಸವ ಡಿ.10ರಂದು

beechi
Published on

ನರೇಗಲ್ಲ: ಡಿಸೆಂಬರ್ 10ರಂದು ಬೀಚಿ ಬಳಗದ ದಶಮಾನೋತ್ಸವವನ್ನು ಸಡಗರ, ಸಂಭ್ರಮದಿಂದ ಆಚರಿಸೋಣ ಎಂದು ಬಳಗದ ನೂತನ ಅಧ್ಯಕ್ಷ ಕೆ.ಎಸ್.ಕಳಕಣ್ಣವರ ಹೇಳಿದರು.

ಪಟ್ಟಣದ ಹಿರೇಮಠದ ಸಭಾ ಭವನದಲ್ಲಿ ಬುಧವಾರ ಆಯೋಜಿಸಿದ್ದ ಪ್ರಸಕ್ತ ಸಾಲಿನ ಸೇವಾ ದೀಕ್ಷೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ದಶಮಾನೋತ್ಸವ ಕಾರ್ಯಕ್ರಮದ ಯಶಸ್ಸಿಗೆ ಎಲ್ಲರ ಸಹಕಾರ ಅಗತ್ಯ ಎಂದರು.

ನಿವೃತ್ತ ಶಿಕ್ಷಕ ಎಂ.ಎಸ್. ದಢೇಸೂರಮಠ ಮಾತನಾಡಿ, ದಶಮಾನೋತ್ಸವ ಸಂದರ್ಭದಲ್ಲಿ ಬೀಚಿ ಬಳಗದ ಸದಸ್ಯತ್ವ ಹೆಚ್ಚಿಸಬೇಕು. ಸಾಹಿತ್ಯಾಭಿಮಾನಿಗಳು ಬೀಚಿ ಬಳಗದ ಸದಸ್ಯರಾಗಬಹುದು. ಇದು ಎಲ್ಲರಿಗೂ ಮುಕ್ತವಾದ ವೇದಿಕೆಯಾಗಿದೆ ಎಂದರು.

ನಿಕಟಪೂರ್ವ ಅಧ್ಯಕ್ಷ ಸುರೇಶ ಹಳ್ಳಿಕೇರಿ ನೂತನ ತಂಡಕ್ಕೆ ಶುಭ ಹಾರೈಸಿದರು. ಶಿವಯೋಗಿ ಜಕ್ಕಲಿ, ಡಿ. ಎ. ಅರವಟಗಿಮಠ, ಡಾ. ರಾಜೇಂದ್ರ ಗಚ್ಚಿನಮಠ, ಎಸ್. ಸಿ. ಗುಳಗಣ್ಣವರ, ರಾಜಶೇಖರಗೌಡ ಪಾಟೀಲ, ಮುಖ್ಯ ಶಿಕ್ಷಕಿ ಭಾರತಿ ಶಿರ್ಸಿ, ಶಿಕ್ಷಕ ಎಂ. ಕೆ. ಬೇವಿನಕಟ್ಟಿ, ಶಿಕ್ಷಕ ಬಿ.ಟಿ. ತಾಳಿ, ನಿವೃತ್ತ ಮುಖ್ಯ ಶಿಕ್ಷಕ ಅರುಣ ಬಿ. ಕುಲಕರ್ಣಿ ಇದ್ದರು. ಕಾರ್ಯದರ್ಶಿ ಎಚ್.ವೈ. ಈಟಿ ನಿರೂಪಿಸಿದರು. ಸಂಚಾಲಕ ಈಶ್ವರ ಬೆಟಗೇರಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net