ವರ್ಕಾಡಿ ಬಾವಲಿಗುಳಿಯಲ್ಲಿ ದಶಮಾನೋತ್ಸವ

ganesha
Published on

ಕಾಸರಗೋಡು: ವರ್ಕಾಡಿ ಬಾವಲಿಗುಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ದಶಮಾನೋತ್ಸವ ಕಾರ್ಯಕ್ರಮ ಸೆ.7ರಂದು ಬಾವಲಿಗುಳಿ ವಠಾರದಲ್ಲಿ ವರ್ಕಾಡಿ ಬ್ರಹ್ಮಶ್ರೀ ದಿನೇಶ್ ಕೃಷ್ಣ ತಂತ್ರಿ ನೇತೃತ್ವದಲ್ಲಿ ವಿವಿಧ ವೈದಿಕ ಕಾರ್ಯಕ್ರಮ ನಡೆಯಲಿದೆ.

ಬೆಳಗ್ಗೆ ಶ್ರೀ ಮಹಾಗಣಪತಿ ದೇವರ ವಿಗ್ರಹ ಪ್ರತಿಷ್ಠಾಪನೆ ನಂತರ ದ್ವಾದಶ ನಾಳಿಕೇರ ಗಣಯಾಗ, ಅಲಂಕಾರ ಪೂಜೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಬೆಳಗ್ಗೆ 10ಕ್ಕೆ ಸ್ಥಳೀಯ ಮಕ್ಕಳ ನೃತ್ಯ ಕಾರ್ಯಕ್ರಮ, 11ರಿಂದ ಮಕ್ಕಳಿಗೆ ಸ್ಪರ್ಧಾ ಕಾರ್ಯಕ್ರಮ, ಮಧ್ಯಾಹ್ನ 12 ರಿಂದ 1ರವರೆಗೆ ರಾಜ್ಯ ಪ್ರಶಸ್ತಿ ಪುರಸ್ಕೃತ ವಿದುಷಿ ಉಮಾ ವಿಷ್ಣು ಹೆಬ್ಬಾರ್ ಮತ್ತು ಶಿಷ್ಯ ವೃಂದ ಭಾರತಿ ನೃತ್ಯಾಲಯ ಮುಡಿಪು ಅವರಿಂದ ನೃತ್ಯ ಸಿಂಚನ, ಮಧ್ಯಾಹ್ನ 1.30ರಿಂದ ಗೀತ್ ಮ್ಯೂಸಿಕಲ್ ಮಂಗಳೂರು ಅವರಿಂದ ಭಕ್ತಿರಸಮಂಜರಿ, ಸಂಜೆ 4ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ. ಸ್ಪೀಕರ್ ಯು.ಟಿ.ಖಾದರ್, ಸಂಸದ ಕ್ಯಾ.ಬ್ರಿಜೇಶ್ ಚೌಟ, ಉದ್ಯಮಿ ಸದಾಶಿವ ಶೆಟ್ಟಿ ಕುಳೂರು ಕನ್ಯಾನ, ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಭಾಗವಹಿಸುವರು. ಧಾರ್ಮಿಕ-ಸಾಮಾಜಿಕ ಶೈಕ್ಷಣಿಕ ಸಹಕಾರಿ ಕ್ಷೇತ್ರಗಳಲ್ಲಿ ಅಪ್ರತಿಮ ಸೇವೆಗೈದ ಸಾಧಕರನ್ನು ಗೌರವಿಸಲಾಗುವುದು. ಮ್ಯಾಜಿಕ್ ಸ್ಟಾರ್ ಕುದ್ರೋಳಿ ಗಣೇಶ್ ಅವರ ವಿಸ್ಮಯ ಜಾದು ಪ್ರದರ್ಶನಗೊಳ್ಳಲಿದೆ.

ನಂತರ ಶ್ರೀಗಣಪತಿಯ ಮಹಾಪೂಜೆ, ಸುದರ್ಶನ ಚಕ್ರ ಸಹಿತ ವಿಶೇಷ ಸುಡುಮದ್ದು ಪ್ರದರ್ಶನ, ಮಹಾಗಣಪತಿಯ ಭವ್ಯ ಶೋಭಾ ಯಾತ್ರೆ ನಡೆದು ಸಾಂತುಪಳಿಕೆ ಮಾರಿಗುಡಿ ಬಳಿ ಕೆರೆಯಲ್ಲಿ ವಿಸರ್ಜನೆ ನಡೆಯುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net