ದೇಶದ ವಿವಿಧೆಡೆಯಿಂದ 160 ಸ್ಪರ್ಧಿಗಳು ಭಾಗಿ: ಜಿಲ್ಲಾ ಟೆನ್ನಿಸ್ ಅಸೋಷಿಯೇಷನ್ ಅಧ್ಯಕ್ಷ ಕೆ.ಆರ್.ದಯಾನಂದ ಮಾಹಿತಿ

1 (2)
Published on

ಮಂಡ್ಯ: ಕ್ರೀಡಾಪಟುವಾಗಲು ಆಸಕ್ತಿ, ಸಮತೋಲನ ಮನೋಭಾವ ಅವಶ್ಯಕ. ಜೂ.16ರವರೆಗೆ ಟೂರ್ನಿ ನಡೆಯಲಿದೆ. ದೇಶದ ವಿವಿಧೆಡೆಯಿಂದ ಸುಮಾರು 160 ಸ್ಪರ್ಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಜಿಲ್ಲಾ ಟೆನ್ನಿಸ್ ಅಸೋಷಿಯೇಷನ್ ಅಧ್ಯಕ್ಷ ಕೆ.ಆರ್.ದಯಾನಂದ ಹೇಳಿದರು.

ನಗರದ ಪಿಇಟಿ ಟೆನ್ನಿಸ್ ಕ್ರೀಡಾಂಗಣದ ಆವರಣದಲ್ಲಿ ಟಾಪ್ ಸರ್ವ್ ಟೆನ್ನಿಸ್ ಅಕಾಡೆಮಿ ವತಿಯಿಂದ ಆಯೋಜಿಸಿದ್ದ ಟೆನ್ನಿಸ್ ಕಪ್ ಟೂರ್ನಿಗೆ ಚಾಲನೆ ನೀಡಿ ಮಾತನಾಡಿದರು. ಪ್ರತಿ ಸ್ಪರ್ಧಿಯೂ ಕ್ರೀಡಾಮನೋಭಾವದಿಂದ ಸೋಲು-ಗೆಲುವನ್ನು ಸ್ವೀಕರಿಸಬೇಕು ಎಂದರು.

ಮುಖ್ಯ ತರಬೇತುದಾರ ಎಂ.ಎಸ್.ಮಂಜುನಾಥ್ ಮಾತನಾಡಿ, ಆಲ್ ಇಂಡಿಯಾ ಟೆನ್ನಿಸ್ ಟೂರ್ನಮೆಂಟ್ 6 ದಿನ ನಡೆಯಲಿದೆ. ದೇಶದ ವಿವಿಧ ರಾಜ್ಯಗಳಿಂದ 16ರೊಳಗಿನ ವಯೋಮಾನದ ಬಾಲಕರು, ಬಾಲಕಿಯರು ಭಾಗವಹಿಸಿದ್ದು, ಗೆದ್ದವರು ಮುಂದಿನ ಹಂತಕ್ಕೆ ಆಯ್ಕೆಯಾಗಲಿದ್ದಾರೆ ಎಂದರು.

ಪಿಇಟಿ ಉಪಾಧ್ಯಕ್ಷ ಶ್ರೀಧರ್, ಬ್ಯಾಡ್ಮಿಂಟನ್ ಅಕಾಡೆಮಿಯ ಅಧ್ಯಕ್ಷ ಅನಿಲ್‌ಕುಮಾರ್, ಟೆನ್ನಿಸ್ ಅಕಾಡೆಮಿ ಖಜಾಂಚಿ ಗಗನ್ ರಮೇಶ್, ಉಪಾಧ್ಯಕ್ಷ ಡಾ.ಗೋಪಾಲಕೃಷ್ಣಗುಪ್ತ, ಕಾರ್ಯದರ್ಶಿ ಅಭಿಷೇಕ್, ಬಲ್ಲೇನಹಳ್ಳಿ ಮಂಜುನಾಥ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net